Header Ads
Breaking News

ಮೂಡುಬಿದಿರೆಯಲ್ಲಿ ಕೋಟಿ-ಚೆನ್ನಯ ಜೋಡುಕರೆ ಕಂಬಳ : ಸಿಎಂ ಯಡಿಯೂರಪ್ಪರಿಂದ ಅಬ್ಬಕ್ಕ ಪ್ರತಿಮೆ ಲೋಕಾರ್ಪಣೆ

ಮೂಡುಬಿದಿರೆ : ಇಲ್ಲಿನ ಕೋಟಿ-ಚೆನ್ನಯ ಜೋಡೆಕರೆ ಕಂಬಳ ಸಮಿತಿಯಿಂದ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ “ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮ”ದಲ್ಲಿ 17ಅವರು ಮೂಡುಬಿದಿರೆಯ ಮಣ್ಣಿನ ಮಗಳು ವೀರರಾಣಿ ಅಬ್ಬಕ್ಕನ ನೂತನ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆಂದು ಕಂಬಳ ಸಮಿತಿಯ ಅಧ್ಯಕ್ಷ, ಕ್ಷೇತ್ರದ ಶಾಸಕ ಉಮಾನಾಥ ಎ.ಕೋಟ್ಯಾನ್ ತಿಳಿಸಿದರು. 

ಅವರು ಕಂಬಳದ ತಯಾರಿಯ ಬಗ್ಗೆ ಸಮಿತಿ ಮತ್ತು ವಿವಿಧ ಇಲಾಖೆಗಳ ಜೊತೆ ಸಭೆ ನಡೆಸಿದರು. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶನಿವಾರ ಬೆಳಿಗ್ಗೆ ೮ ಗಂಟೆಯಿಂದ ಕಂಬಳೋತ್ಸವವು ಆರಂಭಗೊಳ್ಳಿದ್ದು ಚೌಟರ ಅರಮನೆಯ ಕುಲದೀಪ ಎಂ.ಅಧ್ಯಕ್ಷತೆಯಲ್ಲಿ ಮೂರು ಧರ್ಮಗಳ ಧರ್ಮಗುರುಗಳಾದ ಆಲಂಗಾರು ಚರ್ಚಿನ ರೆ/ಫಾ/ ವಾಲ್ಟರ್ ಡಿ”ಸೋಜಾ, ಆಲಂಗಾರು ಬಡಗು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವೇ/ಮೂ. ಈಶ್ವರ ಭಟ್ ಹಾಗೂ ಪುತ್ತಿಗೆ ನೂರನಿ ಮಸೀದಿಯ ಮೌಲಾನ ಝೀಯಾವುಲ್ಲಾ ಹಾಗೂ ಕುಂಟಾಡಿ ಸುಧೀರ್ ಹೆಗ್ಡೆ ಉದ್ಘಾಟಿಸಲಿದ್ದಾರೆಂದು ತಿಳಿಸಿದರು.
ಸಂಜೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಉದ್ಘಾಟಿಸಲಿದ್ದಾರೆ.ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಕಂದಾಯ ಸಚಿವ ಆರ್.ಅಶೋಕ್, ಪ್ರವಾಸೋದ್ಯಮ ಸಚಿವ ಸಿ.ಟಿ ರವಿ, ಸಂಸದೆ ಶೋಭಾ ಕರಂದ್ಲಾಜೆ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಂಬಳ ಸಮಿತಿಯ ಕೋಶಾಧ್ಯಕ್ಷ ಸುರೇಶ್ ಕೆ.ಪೂಜಾರಿ, ಮೂಡುಬಿದಿರೆ ಕಂಬಳ ಸಮಿತಿಯ ಉಪಾಧ್ಯಕ್ಷರುಗಳಾದ ಬಾಹುಬಲಿ ಪ್ರಸಾದ್, ಕೆ.ಪಿ.ಜಗದೀಶ ಅಧಿಕಾರಿ, ಕೆ.ಪಿ ಸುಚರಿತ ಶೆಟ್ಟಿ, ಈಶ್ವರ ಕಟೀಲ್, ಸುದರ್ಶನ್ ಎಂ, ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *