Header Ads
Header Ads
Breaking News

ಮೂಡುಬಿದಿರೆಯಲ್ಲಿ “ಜನ ಸಮೃದ್ಧಿ”ಯ 25ನೇ ಶಾಖೆ : ರಾಮತೀರ್ಥ ಕಾಂಪ್ಲೆಕ್ಸ್, ಮೊದಲನೆ ಮಹಡಿಯಲ್ಲಿ ಉದ್ಘಾಟನೆ

ಮೂಡುಬಿದಿರೆ : ಜನ ಸಮೃದ್ಧಿ ಮಲ್ಟಿಪರ್ಪಸ್ ಕೋ ಅಪರೇಟಿವ್ ಲಿಮಿಟೆಡ್ ಇದರ 25 ನೇ ಶಾಖೆಯು ಮೂಡುಬಿದಿರೆಯ ರಾಮತೀರ್ಥ ಕಾಂಪ್ಲೆಕ್ಸ್, ಮೊದಲನೆ ಮಹಡಿಯಲ್ಲಿ ಉದ್ಘಾಟನೆಗೊಂಡಿತು.

ಜನಸಮೃದ್ಧಿಯ ಆಡಳಿತ ನಿರ್ದೇಶಕ ಮತ್ತು ಅಧ್ಯಕ್ಷ ಶಾಖಾ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿ ಬ್ಯಾಂಕುಗಳು ನರಿಂದ ಠೇವಣಿ ಪಡೆದರೆ ಸಾಲದು. ಸಾಮಾಜಿಕ ಭದ್ರತೆಯನ್ನು ಕಾಪಾಡಿಕೊಂಡು ಬರಬೇಕು. ಜನಸಮೃದ್ಧಿ ಕೇವಲ ಬ್ಯಾಂಕಿಂಗ್ ಅಲ್ಲದೆ ಅನೇಕ ಸಾಮಾಜಿಕ ಕಾರ್ಯಗಳಲ್ಲೂ ಭಾಗಿಯಾಗಿದ್ದು ಮುಂದೆಯೂ ಶಿಕ್ಷಣ ಸಂಸ್ಥೆ, ವೃದ್ಧಾಶ್ರಮ, ಅನಾಥಾಶ್ರಮ ಮತ್ತು ಅಂಗವಿಕಲರ ವಸತಿ ನಿಲಯಗಳನ್ನು ಸ್ಥಾಪಿಸಲು ಚಿಂತನೆ ನಡೆಸಿದೆ.

ರಿಯಲ್ ಎಸ್ಟೇಟ್‌ಗೆ ಪೂರಕವಾಗಿ ಕೋಳಿ ಫಾರ್ಮ್, ಕುರಿ ಮೇಕೆ ಸಾಕಾಣಿಕೆ ಫಾರ್ಮ್‌ಗಳನ್ನು ಮಾಡುತ್ತಿದ್ದೇವೆ. ಖ್ಯಾತ ಚಿತ್ರನಟರಾದ ರವಿಶಂಕರ್ ಮತ್ತು ಸಾಯಿಕುಮಾರ್ ಜನ ಸಮೃದ್ಧಿಯ ಜೊತೆ ಇದ್ದು ಹೋಬಳಿ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಹಿತ ರಾಜ್ಯದ ಮೂಲೆ ಮೂಲೆಯಲ್ಲಿ ಗರಿಷ್ಠ ಸಂಖ್ಯೆಯ ಕೋ-ಅಪರೇಟಿವ್ ಬ್ಯಾಂಕ್‌ಗಳನ್ನು ತೆರೆಯಲಾಗುವುದು. ಸದ್ಯದಲ್ಲೇ ಗೋಲ್ಡ್ ಲೋನ್‌ಗಳನ್ನು ಆರಂಭಿಸಲಾಗುವುದು ಹಾಗೂ ಉತ್ತಮ ಸೇವೆಗಳನ್ನು ಒದಗಿಸಲಾಗುವುದು ಎಂದರು. ಉದ್ಯಮಿ ಅಶ್ವಿನ್ ಜೊಸ್ಸಿ ಪಿರೇರಾ ಮಾತನಾಡಿ ಸಮಾಜದ ಬೆಳವಣಿಗೆಯಲ್ಲಿ ಬ್ಯಾಂಕುಗಳ ಪಾತ್ರ ಮಹತ್ವದ್ದು, ಮೂಡುಬಿದಿರೆಯಲ್ಲಿ ಸಹಕಾರಿ ಬ್ಯಾಂಕ್‌ಗಳು ಈಗಾಗಲೇ ಹಲವು ಇದೆ. ಹೆಚ್ಚಿನ ಬ್ಯಾಂಕುಗಳು ಬಂದರೆ ಅಭಿವೃದ್ಧಿ ಸಾಧ್ಯ. ಗ್ರಾಹಕರು ಕೂಡ ಪಡೆದ ಸಾಲವನ್ನು ಬ್ಯಾಂಕುಗಳಿಗೆ ಕ್ಲಪ್ತ ಸಮಯದಲ್ಲಿ ಮರುಪಾವತಿಸಿ ಬದ್ಧತೆ ಕಾಪಾಡಿದರೆ ಸಹಕಾರಿ ಕ್ಷೇತ್ರಗಳು ಉಳಿಯುತ್ತವೆ ಎಂದರು.

ಸನ್ಮಾನ : ಶಾಖೆಗಳ ಸ್ಥಾಪನೆಗೆ ಸಹಕರಿಸಿದ ಉದ್ಯಮಿಗಳಾದ ಕೀರ್ತನ್ ಶೆಟ್ಟಿ, ಶ್ರೀನಿವಾಸ್ ಶೆಟ್ಟಿ ಮತ್ತು ಸಿಪ್ರಿಯನ್ ಡಿ”ಸೋಜಾ ಅವರನ್ನು ಸನ್ಮಾನಿಸಲಾಯಿತು.ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಾಸು ಪೂಜಾರಿ, ರಾಮತೀರ್ಥ ಕಾಂಪ್ಲೆಕ್ಸ್‌ನ ಮಾಲಕ ಪಿ.ವಿಶ್ವನಾಥ ಭಟ್, ಬಿಜೆಪಿ ಮುಖಂಡ ಮೇಘನಾದ ಶೆಟ್ಟಿ, ವಕೀಲ ಮನೋಜ್ ಶೆಣೈ, ಉದ್ಯಮಿ ಪ್ರೇಮನಾಥ ಮಾರ್ಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಮೃದ್ಧಿಯ ನಿರ್ದೇಶಕರುಗಳಾದ ರಾಜೇಶ್ ಎನ್.ಎಂ, ಗಿರೀಶ್ ಎನ್, ನಾಗರಾಜ, ನಿತ್ಯಾನಂದ ಕೊಟ್ಟಾರಿ, ಸುರೇಶ್ ಶೆಟ್ಟಿ ಮೂಡಿಗೆರೆ ಉಪಸ್ಥಿತರಿದ್ದರು.

ವಿಟ್ಲ ಶಾಖಾ ವ್ಯವಸ್ಥಾಪಕಿ ಉಷಾ ಪದ್ಯಾಣ ಸ್ವಾಗತಿಸಿದರು. ಬ್ಯಾಂಕಿನ ನಿರ್ದೇಶಕರಾದ ಪದ್ಮರಾಜ್ ಪ್ರಾಸ್ತಾವಿಕವಾಗಿ ಮಾತನಾಡಡಿದರು. ನವೀನ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ಗಿರೀಶ್ ಬಿ.ಜೆ ವಂದಿಸಿದರು.

Related posts

Leave a Reply