Header Ads
Header Ads
Breaking News

ಮೂಡುಬಿದಿರೆಯಲ್ಲಿ ಜಿಲ್ಲಾ ಮಟ್ಟದ ಅನಿಲ್ ಕ್ಲಾಸಿಕ್ ದೇಹಧಾರ್ಡ್ಯ ಸ್ಪರ್ಧೆ

ಮೂಡುಬಿದಿರೆ: ಮೆಂಡೋನ್ಸಾ ಡೆವೆಲಪರ್‍ಸ್ ವತಿಯಿಂದ ಮೂಡುಬಿದಿರೆಯ ಪದ್ಮಾವತಿ ಕಲಾ ಮಂದಿರದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದೇಹಧಾರ್ಡ್ಯ ಸ್ಪರ್ಧೆ “ಅನಿಲ್ ಕ್ಲಾಸಿಕ್ – 2019”, ಚಾಂಪಿಯನ್ಸ್ ಆಫ್ ದಿ ಚಾಂಪಿಯನ್ – 2019, ಹಾಗೂ ಮೂಡುಬಿದಿರೆ ಶ್ರೀ – 2019 ದೇಹಧಾರ್ಡ್ಯ ಸ್ಪರ್ಧೆಗಳು ನಡೆದವು.
ಮೂಡುಬಿದಿರೆ ಕೋರ್ಪುಸ್ ಕ್ರಿಸ್ತಿ ಚರ್ಚಿನ ವಂದನೀಯ ಫಾ| ಕ್ಲಿಫರ್ಡ್ ಫೆರ್ನಾಂಡಿಸ್ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಡಿ ನಮ್ಮಲ್ಲಿರುವ ಪ್ರತಿಭೆಗಳನ್ನು ಮನಗಂಡು, ನಕಾರಾತ್ಮಕ ಚಿಂತನೆಗಳಿಗೆ ಕಿವಿಗೊಡದೆ, ಸ್ವಪ್ರಯತ್ನದೊಂದಿಗೆ ನಂಬಿಕೆಯಿಟ್ಟು ಮುಂದುವರಿದರೆ ಯಶಸ್ಸು ಸಾಧ್ಯ ಎಂದರು.

 ಮೂಡುಬಿದಿರೆ ಅರಮನೆಯ ಕುಲದೀಪ್ ಎಂ. ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಿಸ್ಟರ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು 6 ಬಾರಿ ಪ್ರತಿನಿಧಿಸಿದ ಅಂತರಾಷ್ಟ್ರೀಯ ದೇಹಧಾರ್ಡ್ಯ ಪಟು ರೇಮಂಡ್ ಡಿಸೋಜಾ, ಏಕಲವ್ಯ ಪ್ರಶಸ್ತಿ ಪಡೆದ ಅಂತರಾಷ್ಟ್ರೀಯ ದೇಹಧಾರ್ಡ್ಯ ಪಟುಗಳಾದ ರೋಶನ್ ಫೆರಾವೊ, ಶೋಧನ್ ರೈ ಮತ್ತು ಭಾಸ್ಕರ್ ತೊಕ್ಕೊಟ್ಟು ಹಾಗೂ ಸುಮಾರು 10,000 ದೇಹಧಾರ್ಡ್ಯ ಪಟುಗಳಿಗೆ ತರಬೇತಿ ನೀಡಿರುವ ತರಬೇತುದಾರ ಮೂಡುಬಿದಿರೆ ಸೀತಾರಾಮ ಕುಲಾಲ್ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಿಸ್ಟರ್ ವರ್ಲ್ಡ್ ಖ್ಯಾತಿಯ ರೇಮಂಡ್ ಡಿಸೋಜಾ ಮಾತನಾಡಿ ’ಮೂಡುಬಿದಿರೆಯ ಹಲವು ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದು, ದೇಹಧಾರ್ಡ್ಯ ಕ್ಷೇತ್ರದಲ್ಲೂ ಮೂಡುಬಿದಿರೆಯ ಕ್ರೀಡಾಳುಗಳು ಮಿಂಚುವಂತಾಗಲಿ’ ಎಂದರು.ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಜವನೆರ್ ಬೆದ್ರ ಸಂಘಟನೆಯ ಅಧ್ಯಕ್ಷ ಅಮರ್ ಕೋಟೆ, ಬಳಕೆದಾರರ ಜಾಗೃತಿ ವೇದಿಕೆಯ ಸಂಘಟಕ ಡಾ| ರಮಾನಾಥ್ ಪ್ರಭು, ಉದ್ಯಮಿ ಅಬುಲ್ ಅಲಾ, ಮಾಜಿ ಪುರಸಭಾ ಸದಸ್ಯ ಜೊಸ್ಸಿ ಮಿನೇಜಸ್, ಸಂಘಟಕ ಅನಿಲ್ ಮೆಂಡೋನ್ಸಾ, ತರಬೇತುದಾರ ನಾರಾಯಣ ಪಡುಮಲೆ ಉಪಸ್ಥಿತರಿದ್ದರು.

Related posts

Leave a Reply