Header Ads
Header Ads
Breaking News

ಮೂಡುಬಿದಿರೆಯಲ್ಲಿ ಟಿಎಸ್‌ಡಿ ಕಾರ್ ರ್‍ಯಾಲಿ ಫೆ.3 ಮತ್ತು 4ರಂದು ಆಯೋಜನೆ ಬೆದ್ರ ಎಡ್ವೆಂಚರ್ ಕ್ಲಬ್ ಅಧ್ಯಕ್ಷ ಅಕ್ಷಯ್ ಜೈನ್ ಮಾಹಿತಿ

ಮೂಡುಬಿದಿರೆ: ಬೆದ್ರ ಎಡ್ವೆಂಚರ್ ಕ್ಲಬ್, ಇಂಡಿಯನ್ ಮೋಟರ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ತ್ರಿಭುವನ್ ಅಟೋಮೋಟಿವ್ ಸ್ಫೋರ್ಟ್ಸ್ ಕ್ಲಬ್( ಟಾಸ್ಕ್) ಸಹಯೋಗದಲ್ಲಿ ಫೆ 3ಮತ್ತು 4ರಂದು ಮೂಡುಬಿದಿರೆಯಲ್ಲಿ ಟಿಎಸ್‌ಡಿ ಕಾರ್ ರ್‍ಯಾಲಿ-2018 ನಡೆಯಲಿದೆ ಎಂದು ಬೆದ್ರ ಎಡ್ವೆಂಚರ್ ಕ್ಲಬ್ ಅಧ್ಯಕ್ಷ ಅಕ್ಷಯ್ ಜೈನ್ ತಿಳಿಸಿದ್ದಾರೆ.

ಅವರು ಮೂಡುಬಿದಿರೆ ಪ್ರೆಸ್ ಕ್ಲಬ್‌ನಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, 98 ಕಿ.ಮೀ ದೂರ ಕ್ರಮಿಸಬೇಕಾಗಿರುವ ರ್‍ಯಾಲಿಯನ್ನು ಪದ್ಮಾವತಿ ಕಲಾ ಮಂದಿರದಲ್ಲಿ ಮೂಡುಬಿದಿರೆ ಶಾಸಕ ಹಾಗೂ ಟಾಸ್ಕ್ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ರ್‍ಯಾಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ರ್‍ಯಾಲಿಯಲ್ಲಿ ಹೆಸರಾಂತ ವಾಹನ ಚಾಲಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕೇವಲ 65 ಮಂದಿ ಸ್ಪರ್ಧಿಗಳಿಗೆ ಸೀಮಿತವಾದ ಈ ರ್‍ಯಾಲಿಯಲ್ಲಿ ಮೂಡುಬಿದಿರೆ ಮತ್ತು ಹೊರಗಿನ ಸ್ಪರ್ಧಿಗಳಿದ್ದಾರೆ. ಫೆ 3ರಂದು ರಾತ್ರಿ ವಿಭಾಗದ ರ್‍ಯಾಲಿ, ಫೆ 4ರಂದು ಇತರೆ ಕೆಟಗರಿಯ ಸ್ಪರ್ಧೆಗಳು ನಡೆಯಲಿವೆ.
ಬೆದ್ರ ಎಡ್ವೆಂಚರ್ ಕ್ಲಬ್ ಸದಸ್ಯ ನಿತಿನ್ , ಜೇಸೀ ಕಾರ್ಯದರ್ಶಿ ರಾಮಕೃಷ್ಣ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ವರದಿ: ಪ್ರೇಮಶ್ರೀ ಮೂಡಬಿದರೆ

Related posts

Leave a Reply