Header Ads
Header Ads
Breaking News

ಮೂಡುಬಿದಿರೆಯಲ್ಲಿ ನ. 24ರಿಂದ 28ರ ವರೆಗೆ ಅಖಿಲ ಭಾರತ ಅಂತರ್ ವಿ.ವಿ ಅಥ್ಲೆಟಿಕ್ಸ್

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇವುಗಳ ಸಮಯುಕ್ತ ಆಶ್ರಯದಲ್ಲಿ ನವೆಂಬರ್ 24 ರಿಂದ 28ವರೆಗೆ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ 79ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. ನ. 24 ರಂದು ಬೆಳಿಗ್ಗೆ ಸ್ಪರ್ಧೆಗಳು ಆರಂಭವಾಗಲಿದ್ದು ಸಂಜೆ 4.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ.

ಕ್ರೀಡಾಕೂಟದ ವಿಶೇಷ ಆಕರ್ಷಣೆಯಾಗಿ ಹೊನಲು ಬೆಳಕಿನ ವ್ಯವಸ್ಥೆಯನ್ನು ಅಳವಡಿಸಿದ್ದು ಅತ್ಯಾಧುನಿಕ ಫೋಟೊ ಫಿನಿಶ್ ತಂತ್ರಜ್ಞಾನವನ್ನು ಅಳವಡಿಸಲಾಗುವುದು. ಭಾಗವಹಿಸುವ ಕ್ರೀಡಾ ಪಟುಗಳಿಗೆ ಹಾಗೂ ಅಧಿಕಾರಿ ವರ್ಗದವರಿಗೆ ಉಚಿತ ಊಟ, ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಕ್ರೀಡಾಪಟುಗಳಲ್ಲದೆ 2000 ಮಂದಿ ಕ್ರೀಡಾಧಿಕಾರಿಗಳು ಹಾಗೂ ರಾಷ್ಟ್ರದ ಖ್ಯಾತ ಕ್ರೀಡಾಪಟುಗಳನ್ನು, ಕ್ರೀಡಾ ತರಬೇತುದಾರರನ್ನು ಅಹ್ವಾನಿಸಲಾಗುವುದು ಎಂದರು.

ಆಳ್ವಾಸ್ ಸಂಸ್ಥೆಯ ವತಿಯಿಂದ ಈ ಕ್ರೀಡಾ ಕೂಟದಲ್ಲಿ ಕೂಟ ದಾಖಲೆ ಮಾಡಿದವರಿಗೆ 25,000 ನಗದು ಹಾಗೂ ಪದಕ ವಿಜೇತರಿಗೆ ಪ್ರಥಮ 20,000, ದ್ವಿತೀಯ 15,000, ತೃತೀಯ 10,000 ನಗದು ಪುರಸ್ಕಾರ ನೀಡಿ ಗೌರವಿಸಲಾಗುವುದು. ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಪದಕದ ಸಾಧನೆಯನ್ನು ಮಾಡಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕ್ರೀಡಾಪಟುಗಳಾದ ಎಂ. ಆರ್ ಪೂವಮ್ಮ, ದಾರುಣ್ ಅಯ್ಯಸ್ವಾಮಿ ಹಾಗೂ ಯೂತ್ ಒಲಂಪಿಕ್ ಕ್ರೀಡಾ ಕೂಟದಲ್ಲಿ ರಾಷ್ಟ್ರಕ್ಕೆ ಕಂಚಿನ ಪದಕವನ್ನು ತಂದ ಪ್ರವೀಣ್ ಇವರಿಗೆ 1 ಲಕ್ಷ ರೂಪಾಯಿ ನಗದು ಪುರಸ್ಕಾರ ನೀಡಿ ಗೌರವಿಸಲಾಗುವುದು.ಮಂಗಳೂರು ವಿವಿ ಪ್ರಭಾರ ಉಪಕುಲಪತಿ ಡಾ. ಕಿಶೋರ್ ಕುಮಾರ್ ಸಿ.ಕೆ ಉಪಸ್ಥಿತರಿದ್ದರು.

Related posts

Leave a Reply