Header Ads
Header Ads
Breaking News

ಮೂಡುಬಿದಿರೆಯಲ್ಲಿ ಸಮಸ್ತ ಆದರ್ಶ ಸಮ್ಮೇಳನ ಮಾ.30ರಂದು ನಡೆಯಲಿರುವ ಕಾರ್ಯಕ್ರಮ

ದ.ಕ ಯಮಾನೀಸ್ ಎಸೋಸಿಯೇಷನ್ ಹಾಗೂ ಎಸ್‌ಕೆಎಸ್‌ಎಸ್‌ಎಫ್ ಮೂಡುಬಿದಿರೆ ವಲಯದ ಜಂಟಿ ಆಶ್ರಯದಲ್ಲಿ ಸಮಸ್ತ ಆದರ್ಶ ಸಮ್ಮೇಳನವು ಮಾ.30ರಂದು ಲಾಡಿ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಎಸ್‌ಕೆಎಸ್‌ಎಸ್‌ಎಫ್ ಮೂಡುಬಿದಿರೆ ವಲಯದ ಅಧ್ಯಕ್ಷ ಮಾಲಿಕ್ ಅಬ್ದುಲ್ ಅಝೀಝ್ ತಿಳಿಸಿದ್ದಾರೆ.ಅವರು ಮೂಡುಬಿದಿರೆಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ಮಾಹಿತಿಯನ್ನು ನೀಡಿದರು. ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾದ ಅಧ್ಯಕ್ಷ ಶೈಖುನಾ ಸಯ್ಯಿದುಲ್ ಉಲಮಾ ಅಸಯ್ಯದ್ ಮುಹಮ್ಮದ್ ಜಿಫ್ರೀ ಮುತ್ತುಕೋಯ ತಂಞಲ್ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ದ.ಕ ಖಾಝಿ ಶೈಖುನಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಅಸರ್ ನಮಾಜ್‌ನ ನಂತರ ಆರಂಭಗೊಳ್ಳುವ ಕಾರ್ಯಕ್ರಮದಲ್ಲಿ ಮಿತ್ತಬೈಲು ಅಲ್‌ಹಾಫಿಲ್ ಅಬ್ದುಲ್ ಹಕೀಂ ಯಮಾನಿ ಖಿರಾಅತ್ ಪಠಿಸಲಿದ್ದು ಅತ್ರಾಡಿಯ ಖಾಝಿ ಶೈಖುನಾ ಅಲ್‌ಹಾಜಿ ವಿ.ಕೆ.ಅಬುಬಕ್ಕರ್ ಮುಸ್ಲಿಯಾರ್ ದುವಾ ನೆರವೇರಿಸಲಿದ್ದಾರೆ ಎಂದು ತಿಳಿಸಿದರು. ಮೂಡುಬಿದಿರೆ ಟೌನ್ ಬದ್ರಿಯಾ, ಜುಮ್ಮಾ ಮಸೀದಿಯ ಖತೀಬರಾದ ಮುಸ್ತಫಾ ಯಮಾನಿ, ಮೂಡುಬಿದಿರೆ ರೇಂಜ್ ಅಧ್ಯಕ್ಷ ಅಬ್ದುಸ್ಸಲಾಂ ಯಮಾನಿ, ಎಸ್‌ಕೆಎಸ್‌ಎಸ್‌ಎಫ್ ಮೂಡುಬಿದಿರೆ ವಲಯದ ಪ್ರಧಾನ ಕಾರ್ಯದರ್ಶಿ ಫಾರೂಕ್ ವಿಶಾಲ್ ನಗರ ಉಪಸ್ಥಿತರಿದ್ದರು.