Header Ads
Header Ads
Breaking News

ಮೂಡುಬಿದಿರೆಯಲ್ಲಿ ಸಮಸ್ತ ಆದರ್ಶ ಸಮ್ಮೇಳನ ಪ್ರವಾದಿಯ ವಚನ ಇಂದು ಸಾಕ್ಷಾತ್ಕಾರಗೊಳ್ಳುತ್ತಿದೆ ದ.ಕ ಖಾಝಿ ಶೈಖುನಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅಭಿಪ್ರಾಯ

ಮೂಡುಬಿದಿರೆ : ನನ್ನ ಸಮುದಾಯವು 73 ವಿಭಾಗಗಳಾಗಿ ಮಾರ್ಪಡಲಿವೆ ಎಂಬ ಪ್ರವಾದಿ ವಚನವು ಇಂದು ಸಾಕ್ಷಾತ್ಕಾರಗೊಳ್ಳುತ್ತಿದೆ. 72 ವಿಭಾಗಗಳು ವಿಜಯಿಗಳಲ್ಲ ಕೇವಲ ಒಂದೇ ಒಂದು ಸಮುದಾಯವು ವಿಜಯಿಗಳಾಗಿವೆ ಅದುವೇ “ಅಹ್ಲ್ ಸುನ್ನತ್ ವಲ್ ಜಮಾಅತ್’ ಸಮಸ್ತ ಕೇರಳ ಜಂಯ್ಯಿಯತ್ತುಲ್ ಉಲಮಾ ಇದರ ಉಳಿವಿಗಾಗಿ ಅಂದು ಇಂದು ಅವಿರತವಾಗಿ ಶ್ರಮಿಸುತ್ತಿದೆ ಎಂದು ದ.ಕ ಖಾಝಿ ಬಹು ಶೈಖುನಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ಹೇಳಿದರು.

ದ.ಕ ಯಮಾನೀಸ್ ಎಸೋಸಿಯೇಷನ್ ಹಾಗೂ ಎಸ್‌ಕೆಎಸ್‌ಎಸ್‌ಎಫ್ ಮೂಡುಬಿದಿರೆ ವಲಯ ಇವುಗಳ ಜಂಟಿ ಆಶ್ರಯದಲ್ಲಿ ಲಾಡಿ ಮಸೀದಿ ವಠಾರದಲ್ಲಿ ನಡೆದ ಸಮಸ್ತ ಆದರ್ಶ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.ಎಸ್‌ಕೆಎಸ್‌ಎಸ್‌ಎಫ್, ಇಸ್ತಿಕಾಮ, ಕೇಂದ್ರ ಸಮಿತಿಯ ಸದಸ್ಯ ಅನ್ವರ್ ಹುಸೈನ್ ಹುದವಿ “ಅಹ್ಲು ಸುನ್ನತ್ ವಲ್-ಜಮಾಅತ್” ಎಂಬ ವಿಷಯದ ಕುರಿತು ಮುಖ್ಯ ಭಾಷಣಕಾರರಾಗಿ ಮಾತನಾಡಿ ಒಂದು ಸಮಾಜಕ್ಕೆ ಸರ್ವ ರೀತಿಯಲ್ಲಿ ಬೇಕಾಗುವಂತಹ ಶಿಕ್ಷಣವನ್ನು ನೀಡುವಲ್ಲಿ . ಸಮಸ್ತ ಕೇರಳ ಜಂ-ಇಯ್ಯತುಲ್ ಮಾದರಿಯಾಗಿದ್ದು ಇದು ಧರ್ಮದ ನೈಜತೆಯನ್ನು ಎತ್ತಿ ಹಿಡಿದು ಇತರ ಸಮುದಾಯಗಳ ಜತೆ ಪ್ರೀತಿ-ವಿಶ್ವಾಸ- ಸಾಮರಸ್ಯದೊಂದಿಗೆ ಯಾವ ರೀತಿ ಬಾಳಬೇಕೆಂಬುದರ ಬಗ್ಗೆ ತಿಳಿಸಿಕೊಡುವಂತಹ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದ ಅವರು ದ.ಕ ಜಿಲ್ಲೆಯಲ್ಲಿ ಮಾನವ ಸರಪಳಿಯ ಮೂಲಕ ಪ್ರೀತಿ -ವಿಶ್ವಾಸವನ್ನು ತಿಳಿಸಿಕೊಡುವ ಕೆಲಸಗಳು ನಡೆಯುತ್ತಿದ್ದು ಅದರಲ್ಲಿ ಮೂಉಬಿದಿರೆಯಲ್ಲಿ ನಡೆದ ಮಾನವ ಸರಪಳಿಯು ಎಲ್ಲಾ ಜನರ ಸಹಕಾರದೊಂದಿಗೆ ಯಶಸ್ವಿಯಾಗಿದೆ ಎಂದು ತಿಳಿಸಿದರು.ಎಸ್‌ಕೆಎಸ್‌ಎಸ್‌ಎಫ್‌ನ ಕೇಂದ್ರ ಸಮಿತಿಯ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಸ್ವದಕುತುಲ್ಲಾ ಫೈಝಿ, ದ.ಕ ಜಿಲ್ಲಾ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಖಾಸಿಮ್ ದಾರಿಮಿ ಕಿನ್ಯ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ, ಉಪಾಧ್ಯಕ್ಷರಾಗಿರುವ ಅಬ್ದುಲ್ ಅಝೀಝ್ ಮಾಲಿಕ್ ಮತ್ತು ಕೋಶಾಧಿಕಾರಿ ಅಮೀರ್ ತಂಙಳ್ ಕಿನ್ಯ ಅವರನ್ನು ಸನ್ಮಾನಿಸಲಾಯಿತು.ಕರ್ನಾಟಕ ಫೈಝೀಸ್ ಅಧ್ಯಕ್ಷ ಅಲ್‌ಹಾಜ್ ಕೆ.ಎಂ ಉಸ್ಮನುಲ್ ಫೈಝಿ ಮತ್ತು ಮೂಡುಬಿದಿರೆ ರೇಂಜ್ ಅಧ್ಯಕ್ಷ ಅಬ್ದುಸ್ಸಲಾಂ ಯಮಾನಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಯಮಾನೀಸ್ ಕೇಂದ್ರ ಸಮಿತಿಯ ಸದಸ್ಯ ಅಬುಬಕ್ಕರ್ ಯಮಾನಿ, ಕಾಶಿಪಟ್ಣ ಮುಹಿಯ್ಯದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷ ಹಾಜಿ ಅಬ್ದುರ್ರಹ್ಮಾನ್, ಮೂಡುಬಿದಿರೆ ಸ್ವಾಗತ ಸಮಿತಿಯ ಕನ್ವೀನರ್ ಅಬ್ದುರ್ರಹ್ಮಾನ್ ಮೂಡುಬಿದಿರೆ ಟೌನ್ ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಎಂ.ಎಚ್.ಇಕ್ಬಾಲ್, ಎಸ್‌ಕೆಎಸ್‌ಎಸ್‌ಎಫ್‌ನ ಮೂಡುಬಿದಿರೆ ವಲಯದ ಪ್ರಧಾನ ಕಾರ್ಯದರ್ಶಿ ಫಾರೂಕ್ ವಿಶಾಲ ನಗರ, ಕೋಶಾಧಿಕಾರಿ ಯು.ಕೆ ಮೊಹಮ್ಮದ್ ಹಾಜಿ, ಮೂಡುಬಿದಿರೆ ಟೌನ್ ಬದ್ರಿಯಾ, ಜುಮ್ಮಾ ಮಸೀದಿಯ ಖತೀಬರಾದ ಮುಸ್ತಫಾ ಯಮಾನಿ, ರೇಂಜ್ ಅಧ್ಯಕ್ಷ ಅಬ್ದುಸ್ಸಲಾಂ ಯಮಾನಿ, ಮತ್ತಿತರರು ಉಪಸ್ಥಿತರಿದ್ದರು.ಮಿತ್ತಬೈಲು ಅಲ್‌ಹಾಫಿಲ್ ಅಬ್ದುಲ್ ಹಕೀಂ ಯಮಾನಿ ಖಿರಾಅತ್ ಪಠಿಸಲಿದ್ದು ಅತ್ರಾಡಿಯ ಖಾಝಿ ಶೈಖುನಾ ಅಲ್‌ಹಾಜಿ ವಿ.ಕೆ.ಅಬುಬಕ್ಕರ್ ಮುಸ್ಲಿಯಾರ್ ದುವಾ ನೆರವೇರಿಸಿದರು. ಶಂಸುಲ್ ಉಲಮ ಅರೇಬಿಕ್ ಕಾಲೇಜಿನ ವಿದ್ಯಾರ್ಥಿಗಳಾದ ಕಲಂದರ್ ವೇಣೂರು, ಸ್ವಾಬಿರ್ ಈಶ್ವರಮಂಗಲ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ವಿದ್ಯಾರ್ಥಿಗಳಿಂದ ದಫ್ ಕಾರ್ಯಕ್ರಮ ನಡೆಯಿತು. ಮೂಡುಬಿದಿರೆ ಟೌನ್ ಬದ್ರಿಯಾ ಜುಮ್ಮಾ ಮಸೀದಿಯ ಖತೀಬರಾದ ಮುಸ್ತಫಾ ಯಮಾನಿ ಅವರು ಕಾರ್ಯಕ್ರಮದ ನೇತೃತ್ವ ವಹಿಸದ್ದರು.