Header Ads
Header Ads
Header Ads
Breaking News

ಮೂಡುಬಿದಿರೆಯಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ನನ್ನ ಮಾತು ಸುಳ್ಳೆಂದು ಸಾಬೀತಾದರೆ ನೇಣು ಹಾಕಿಕೊಳ್ತೇನೆ ಹಿಂದುಳಿದ ವರ್ಗಗಳ ಮೊರ್ಚಾದ ರಾಜ್ಯಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಹೇಳಿಕೆ

 

ಮೂಡುಬಿದಿರೆ: ಹಲವು ಭೂ ಅವ್ಯವಹಾರಗಳಲ್ಲಿ ಪಾಲ್ಗೊಂಡಿರುವ ಈ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಎರಡು ಪ್ರಕರಣಗಳ ಬಗ್ಗೆ ನಾಡಿನ ಜನತೆಯ ಮುಂದೆ ಮಾತನಾಡಿದ್ದೇನೆ. ಅವರ ಇನ್ನೂ ಅನೇಕ ಅವ್ಯವಹಾರಗಳ ಬಗ್ಗೆ ನನ್ನಲ್ಲಿ ಮಾಹಿತಿಗಳಿವೆ. ಆದರೆ ಸಿದ್ಧರಾಮಯ್ಯ ತಾವು ತಪ್ಪೇ ಮಾಡಿಲ್ಲ ಎನ್ನುವುದಾದರೆ ವಿಧಾನ ಸೌಧದ ಮುಂದೆ ವೇದಿಕೆ ಕಲ್ಪಿಸಿಕೊಟ್ಟು ಚರ್ಚೆಗೆ ಮುಂದೆ ಬರಲಿ. ಹಿಂದುಳಿದ ವರ್ಗಗಳ ಮೊರ್ಚಾದ ರಾಜ್ಯಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಹೇಳಿದರು.ಅವರು ಬಿಜೆಪಿ ಮತ್ತು ಹಿಂದುಳಿದ ವರ್ಗಗಳ ಮೋರ್ಚಾ ಮೂಡುಬಿದಿರೆ ಮಂಡಲದ ವತಿಯಿಂದ ರವಿವಾರ ಇಲ್ಲಿನ ಪದ್ಮಾವತಿ ಕಲಾ ಮಂದಿರದಲ್ಲಿ ನಡೆದ ಹಿಂದುಳಿದ ವರ್ಗಗಳ ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಸಂಸದ ನಳಿನ್ ಕುಮಾರ್ ಕಟೀಲ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ ಕಟೀಲಿನಲ್ಲಿ ರಸ್ತೆ ಅಗಲ ಮಾಡಲು ಅಡ್ಡ ನಿಲ್ಲುವ, ಮಂಗಳೂರು ಮೂಡುಬಿದಿರೆ ಹೈವೇ ಅಗಲವಾದರೆ ಚರ್ಚು ಮಸೀದಿಗೆ ತೊಂದರೆಯಾಗುತ್ತದೆ ಎಂದು ಜಾತಿ ರಾಜಕಾರಣದಿಂದ ಅಡ್ಡಿಪಡಿಸುತ್ತಿರುವ ಜನಪ್ರತಿನಿಧಿಯ ತೊಂದರೆಗಳನ್ನೆಲ್ಲ ಮೆಟ್ಟಿನಿಂತು ಮುಂದಿನ ಒಂದು ವರ್ಷದೊಳಗೆ ಹೈವೇ ಚತುಷ್ಪಥ ಕಾಮಗಾರಿ ನಡೆಸುವುದಾಗಿ ನಳಿನ್ ಘೋಷಿಸಿದರು.

ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಎಂ, ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯದರ್ಶಿ ರವಿಚಂದ್ರ, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಸುರೇಶ್ ಕಣಿಮರಡ್ಕ, ಜಿಲ್ಲಾ ಉಪಾಧ್ಯಕ್ಷ ಕೆ. ಭುವನಾಭಿರಾಮ ಉಡುಪ, ಕೆ.ಪಿ ಜಗದೀಶ ಅಧಿಕಾರಿ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಪ್ರೇಮಾಶ್ರೀ ಮೂಡಬಿದರೆ

Related posts

Leave a Reply