Header Ads
Header Ads
Header Ads
Breaking News

ಮೂಡುಬಿದಿರೆಯಲ್ಲಿ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳ

ಮೂಡುಬಿದಿರೆ : ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ “ವೀರರಾಣಿ ಅಬ್ಬಕ್ಕ ಸಂಸ್ಕøತಿ” ಗ್ರಾಮದಲ್ಲಿ ನಡೆಯುವ 17ನೇ ವರ್ಷದ ಮೂಡುಬಿದಿರೆ ಕೋಟಿ-ಚೆನ್ನಯ ಜೋಡುಕರೆ ಬಯಲು ಕಂಬಳವು ಇಂದು ಬೆಳಿಗ್ಗೆ ಆಲಂಗಾರು ಚರ್ಚಿನ ಧರ್ಮಗುರು ರೆ/ಫಾ/ ವಾಲ್ಟರ್ ಡಿ”ಸೋಜಾ, ಆಲಂಗಾರು ಬಡಗು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವೇ/ಮೂ. ಈಶ್ವರ ಭಟ್, ಪುತ್ತಿಗೆ ನೂರನಿ ಮಸೀದಿಯ ಮೌಲಾನ ಝೀಯಾವುಲ್ಲಾ ಮತ್ತು ಚೌಟರ ಅರಮನೆಯ ಕುಲದೀಪ್ ಎಂ ಅವರು ಕಂಬಳದ ಕರೆಗೆ ದೇವಸ್ಥಾನಗಳ ಪ್ರಸಾದವನ್ನು ಪ್ರೋಕ್ಷಣೆ ಮಾಡಿ ದೀಪ ಬೆಳಗಿಸುವ ಮಾಡುವ ಮೂಲಕ ಚಾಲನೆಯನ್ನು ನೀಡಿ ಆಶೀರ್ವಚನ ನೀಡಿದರು. 

ಮೂಡುಬಿದಿರೆ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ವೀರರಾಣಿ ಅಬ್ಬಕ್ಕ ಪ್ರತಿಮೆಗೆ ಸಂಪ್ರೋಕ್ಷಣೆ ಸಹಿತ ಪ್ರಾರ್ಥನೆ ಸಲ್ಲಿಸಿ ಮಾತನಾಡಿ ವೀರರಾಣಿ ಅಬ್ಬಕ್ಕ ಸಂಸ್ಕøತಿ ಗ್ರಾಮವಾಗಿರುವ ಕಡಲಕೆರೆಯ ಆವರಣದಲ್ಲಿ ಮೂಡುಬಿದಿರೆಯ ಹೆಮ್ಮೆಯ ಮಗಳು ಅಬ್ಬಕ್ಕಳ ಪ್ರತಿಮೆಯನ್ನು ನಿರ್ಮಿಸಿರುವುದು ಸಂತಸದ ವಿಷಯವಾಗಿದೆ. ಅದೂ ಕಂಬಳ ನಡೆಯುವ ಸಂದರ್ಭದಲ್ಲಿ ಮುಖ್ಯಮಂತ್ರಿಯಿಂದ ಅನಾವರಣಗೊಳಿಸಿರುವುದು ಎಲ್ಲರಿಗೂ ಹೆಮ್ಮೆ ಎಂದರು. ಉದ್ಯಮಿ ಕುಂಟಾಡಿ ಸುಧೀರ್ ಹೆಗ್ಡೆ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಂಬಳ ಸಮಿತಿಯ ಅಧ್ಯಕ್ಷ, ಶಾಸಕ ಉಮಾನಾಥ ಕೋಟ್ಯಾನ್, ಜಿಲ್ಲಾ ಕಂಬಳ ಸಮಿತಿಯ ಕೋಶಾಧಿಕಾರಿ ಸುರೇಶ್ ಕೆ,ಪೂಜಾರಿ, ಮೂಡುಬಿದಿರೆ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಗುಣಪಾಲ ಕಡಂಬ, ಉಪಾಧ್ಯಕ್ಷರುಗಳಾದ ಸದಾನಂದ ಶೆಟ್ಟಿ ಬೆಳುವಾಯಿ, ಮೇಘನಾಥ ಶೆಟ್ಟಿ, ಸುದರ್ಶನ್ ಎಂ, ಕೆ.ಪಿ.ಜಗದೀಶ ಅಧಿಕಾರಿ, ಬಾಹುಬಲಿ ಪ್ರಸಾದ್, ಕೆ.ಪಿ.ಸುಚರಿತ ಶೆಟ್ಟಿ, ಕೆ.ಆರ್.ಪಂಡಿತ್, ಕಾರ್ಯದರ್ಶಿಗಳಾದ ಕೆ.ಪಿ.ಸುಚರಿತ ಶೆಟ್ಟಿ, ರಂಜಿತ್ ಪೂಜಾರಿ, ಜೋಯ್ಲಸ್ ಡಿ”ಸೋಜಾ, ನಾಗರಾಜ ಪೂಜಾರಿ, ಪ್ರಸಾದ್ ಕುಮಾರ್, ಗೌರವ ಸಲಹೆಗಾರ ಕೆ.ಶ್ರೀಪತಿ ಭಟ್, ಕಲ್ಲಬೆಟ್ಟು ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಮತ್ತು ಮತ್ತು ಪದಾಧಿಕಾರಿಗಳು ಈ ಸಂದರ್ಭದಲ್ಲಿದ್ದರು.

Related posts

Leave a Reply

Your email address will not be published. Required fields are marked *