Header Ads
Header Ads
Header Ads
Breaking News

ಮೂಡುಬಿದಿರೆಯಲ್ಲೂ 69 ನೇ ಗಣರಾಜ್ಯೋತ್ಸವ ದಿನಾಚರಣೆ ಶಾಸಕ ಕೆ.ಅಭಯಚಂದ್ರ ಜೈನ್ ಧ್ವಜಾರೋಹಣ

ಮೂಡುಬಿದಿರೆ ಪುರಸಭೆಯಲ್ಲಿ ಕ್ಷೇತ್ರದ ಶಾಸಕ ಕೆ.ಅಭಯಚಂದ್ರ ಜೈನ್ ಅವರು ಧ್ವಜವನ್ನು ಅರಳಿಸುವ ಮೂಲಕ 69 ನೇ ವರ್ಷದ ಗಣರಾಜ್ಯೋತ್ಸವ ಆಚರಣೆಯನ್ನು ಆಚರಿಸಲಾಯಿತು. ನಂತರ ಮಾತನಾಡಿದ ಜೈನ್ ಅವರು ದೇಶ ಗಣರಾಜ್ಯವಾದವಾದ ನಂತರ ಬಡವ ಬಲ್ಲಿದರೆನ್ನದೆ ಎಲ್ಲರಿಗೂ ಸಮಾನತೆಯಿಂದ ಶಿಕ್ಷಣ ದೊರೆತಿದೆ ಮತ್ತು ಉತ್ತಮ ಜೀವನ ನಡೆಸಲು ಸಾಮರ್ಥ್ಯ ಸಿಕ್ಕಿದೆ. ಇದರಿಂದಾಗಿ ಇಂದು ನಮ್ಮ ದೇಶ ಬಲಿಷ್ಠವಾಗಿ ಎದ್ದು ನಿಂತಿದೆ. ಈ ನಿಟ್ಟಿನಲ್ಲಿ ನಾವು ಏಕತೆ ಮತ್ತು ಜಾತ್ಯಾತೀತ ಮನೋಭಾವನೆಯಿಂದ ಬಲಿಷ್ಠ ವ್ಯಕ್ತಿಗಳಾಗಿ ಮುಂದೆ ಸಾಗಬೇಕಾಗಿದೆ ಎಂದು ಹೇಳಿದರು.

 

 

 

 

ಮೂಡುಬಿದಿರೆ ಲೇಬರ್ ಶಾಲೆಯ ವಿದ್ಯಾರ್ಥಿಗಳು “ಝಂಡಾ ಊಂಚಾ ರಹೇಹಾ ಹಮಾರಾ” ಮತ್ತು ರಾಷ್ಟ್ರಗೀತೆಯನ್ನು ಹಾಡಿದರು. ಈ ವೇಳೆ ಪುರಸಭಾ ಅಧ್ಯಕ್ಷತೆ ಹರಿಣಾಕ್ಷಿ.ಎಂ.ಸುವರ್ಣ, ಉಪಾಧ್ಯಕ್ಷ ವಿನೋದ್ ಸೆರಾವೋ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply