Header Ads
Header Ads
Header Ads
Breaking News

ಮೂಡುಬಿದಿರೆಯ ಆಟೋ ಚಾಲಕರು “ಬ್ರಾಂಡ್ ಅಂಬಾಸಿಡರ್” ಧನಲಕ್ಷ್ಮೀ ಪೂಜೆಯಲ್ಲಿ ಅಭಯಚಂದ್ರ ಜೈನ್ ಹೊಗಳಿಕೆ ಮೂಡಬಿದ್ರೆಯಲ್ಲಿ ನಡೆದ ಕಾರ್ಯಕ್ರಮ

ಮೂಡಬಿದ್ರೆಯಲ್ಲಿ ಆಟೋ ರಿಕ್ಷಾ ಮಾಲಕ-ಚಾಲಕರ ಸಂಘ ಮೂಡುಬಿದಿರೆ ಇದರ ವತಿಯಿಂದ ವರ್ಷಂಪ್ರತಿ ಜರಗುವಂತೆ ಶ್ರೀ ಧನಲಕ್ಷ್ಮೀ ಪೂಜೆ ಮತ್ತು ವಾಹನ ಪೂಜೆಯು ಸಮಾಜ ಮಂದಿರದ ಕಾಂಪ್ಲೆಕ್ಸ್‌ನ ಮುಂಭಾಗದಲ್ಲಿ ಗುರುವಾರ ರಾತ್ರಿ ಆಲಂಗಾರು ಶ್ರೀ ಈಶ್ವರ ಭಟ್ ನೇತೃತ್ವದಲ್ಲಿ ನಡೆಯಿತು.

ಶಾಸಕ ಕೆ. ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಉತ್ತಮ ಗುಣ ನಡತೆಯನ್ನು ಹೊಂದಿದವರು ಮೂಡುಬಿದಿರೆಯ ಆಟೋ ಚಾಲಕರು. ದೂರದೂರುಗಳಿಂದ ಮೂಡುಬಿದಿರೆಗೆ ಬರುವ ಯಾತ್ರಿಕರೂ ಕೂಡಾ ತಮ್ಮನ್ನು ಕೊಂಡಾಡುವಂತ್ತಾಗಬೇಕು. ಸೇವಾ ಮನೋಭಾವವನ್ನು ಹೊಂದಿರುವ ತಾವು ಸದಾ ಸೇವಾ ಮನೋಭಾವದ ಮೂಲಕ ಸೇವೆ ಮಾಡಬೇಕು ಎಂದು ಹೇಳಿದ ಅವರು ಮೂಡುಬಿದಿರೆಯ ರಿಕ್ಷಾ ಚಾಲಕರು ಇತರರಿಗೆ ಮಾದರಿಯಾಗುವ ಮೂಲಕ “ಬ್ರಾಂಡ್ ಅಂಬಾಸಿಡರ್”ಗಳಾಗಿದ್ದಾರೆ ಎಂದರು. .

ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಎಂ.ಎಸ್ ಕೋಟ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಪ್ರಶಾಂತ್ ಅಂಚನ್ ಅಧ್ಯಕ್ಷತೆಯಲ್ಲಿ ಶಾಸಕ ಕೆ. ಅಭಯಚಂದ್ರ ಜೈನ್, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಹಾಗೂ ಎಂ.ಎಸ್. ಕೋಟ್ಯಾನ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಪುರಸಭಾ ಉಪಾಧ್ಯಕ್ಷ ವಿನೋದ್ ಸೆರಾವೋ, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಸದಸ್ಯರಾದ ಬಾಹುಬಲಿ ಪ್ರಸಾದ್, ಸುರೇಶ್ ಕೋಟ್ಯಾನ್, ನಾಗರಾಜ ಪೂಜಾರಿ, ರಾಜೇಶ್ ಕೋಟೆಕಾರ್, ಮೂಡಾ ಅಧ್ಯಕ್ಷ ಸುರೇಶ್ ಪ್ರಭು, ಜೆಡಿ‌ಎಸ್ ಕ್ಷೇತ್ರಾಧ್ಯಕ್ಷ ಅಶ್ವಿನ್ ಜೆ.ಪಿರೇರಾ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರುಗಳಾದ ಉಮಾನಾಥ ಕೋಟ್ಯಾನ್, ಕೆ.ಪಿ ಜಗದೀಶ ಅಧಿಕಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಮೇಘನಾಥ ಶೆಟ್ಟಿ, ಅತಿಥಿಗಳಾಗಿ ಭಾವಹಿಸಿದ್ದರು.

ಸಂಘದ ಕಾರ್ಯದರ್ಶಿ ರಾಜೇಶ್ ಸುವರ್ಣ, ಉಪಾಧ್ಯಕ್ಷರುಗಳಾದ ರಾಕೇಶ್ ಕೋಟ್ಯಾನ್, ದಿನೇಶ್ ಪೂಜಾರಿ ಕರಿಂಜೆ,ಮಜೀದ್ ಕೊಡಂಗಲ್ಲು, ಗಣೇಶ್ ದೇವಾಡಿಗ ಕೆಸರ್‌ಗದ್ದೆ,ವಿಶ್ವನಾಥ ಒಂಟಿಕಟ್ಟೆ, ಕೋಶಾಧಿಕಾರಿ ಸಂತೋಷ್ ಆರ್.ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts

Leave a Reply