

ಮೂಡುಬಿದಿರೆ : ಕನ್ನಡ ಭಾಷೆ ನಮ್ಮ ಆಧ್ಯತೆಯಾಗಬೇಕು. ನನ್ನ ತಾಯಿ ಮೊದಲು, ನನ್ನ ಭಾಷೆ ಮೊದಲು ಎನ್ನವ ಮನಸ್ಥಿತಿ ನಮ್ಮದಾಗಬೇಕು. ನಮ್ಮ ನೆಲದಲ್ಲಿ ಮೂಲಭೂತ ಸೌಕರ್ಯ ಪಡೆಯುವ ಯಾವುದೇ ವ್ಯಕ್ತಿ, ಸಂಸ್ಥೆಗಳು ಇಲ್ಲಿನ ಕಾಲ, ಜಾಗ, ಭಾಷೆಯನ್ನು ಗೌರವಿಸಬೇಕು. ಕನ್ನಡ ತಂತ್ರಾಂಶದ ಬಗ್ಗೆ ಯುವಕರಲ್ಲಿ ಅರಿವು, ಬಳಕೆ ಹೆಚ್ಚಾಗಬೇಕು. ಬಹುರಾಷ್ಟ್ರೀಯ ಕಂಪೆನಿಗಳು ಕನ್ನಡ ನಾಡು, ನುಡಿಯ ನಿರ್ಲಕ್ಷ್ಯ ತಾಳುತ್ತೀವೆ. ಇಂತಹ ಕಂಪೆನಿಗಳು ತಪ್ಪನ್ನು ತಿದ್ದಿಕೊಳ್ಳದಿದ್ದಲ್ಲಿ ಮೂಲಭೂತ ಸೌಕರ್ಯಗಳನ್ನು ಕಡಿತಗೊಳಿಸಲಾಗುವುದು. ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಹೇಳಿದರು. ಕಲ್ಲಬೆಟ್ಟುವಿನಲ್ಲಿರುವ ಇನ್ನೋವೇಟಿವ್ ಲರ್ನಿಂಗ್ ಫೌಂಡೇಶನ್ನ ಎಕ್ಸಲೆಂಟ್ ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜು ಪದವಿಪೂರ್ವ ಮತ್ತು ಆಂಗ್ಲಮಾಧ್ಯಮ ಶಾಲೆಯ ಅಶ್ರಯದಲ್ಲಿ ಶುಕ್ರವಾರ ನಡೆದ ಕನ್ನಡ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.
ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್, ಕಾಲೇಜಿನ ಪ್ರಾಂಶುಪಾಲ ಪ್ರದೀಪ್ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.