Header Ads
Header Ads
Breaking News

ಮೂಡುಬಿದಿರೆ:ವೈಜ್ಞಾನಿಕ ಪರಿಹಾರಕ್ಕೆ ಆಗ್ರಹಿಸಿ ವಿಧಾನಸೌಧದಲ್ಲಿ ಶಾಸಕರ ಧ್ವನಿ.

ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಭತ್ತ ಹಾಗೂ ಅಡಿಕೆಗೆ ಪ್ರಾಕೃತಿಕ ಕೊಳೆರೋಗಯಿಂದಾಗುವ ಬೆಳೆಹಾನಿ ಮತ್ತು ನಷ್ಟಕ್ಕೆ ಮತ್ತು ಎಲೆಹಳದಿ ರೋಗದಿಂದ ಕೃಷಿ ಕಳಕೊಂಡ ರೈತರಿಗೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ನೀಡುವಂತೆ ವಿಧಾನಸೌಧದಲ್ಲಿ ಧ್ವನಿ ಎತ್ತಬೇಕೆಂದು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರಿಗೆ ಸಹಿತ ಕರಾವಳಿಯ ಶಾಸಕರನ್ನು ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆಯು ಶುಕ್ರವಾರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿಕೊಂಡಿದೆ.
ಸಂಘಟನೆಯ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ಲಿಯೋ ವಾಲ್ಟರ್ ನಝರತ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಮಾರು 3 ಸಾವಿರ ಹೆಕ್ಟೇರ್ ಅಡಿಕೆ ತೋಟವು ಎಲೆ ಹಳದಿ ರೋಗದಿಂದಾಗಿ ನಾಶವಾಗಿದೆ. ಈಗಾಗಲೇ ರೈತರಿಂದ ಪ್ರಾಕೃತಿಕ ವಿಕೋಪ ಬೆಳೆ ವಿಮೆಗೆ ವಿಮಾ ಕಂತನ್ನು ಸ್ವೀಕರಿಸಲಾಗಿದೆ. ಬಹಳಷ್ಟು ರೈತರು ವಿಮಾ ಕಂತು ಪಾವತಿಸಲು ಅಸಾಧ್ಯವಾಗಿದೆ ಎಂದರು.
ಸಂಘಟನಾ ಕಾರ್ಯದರ್ಶಿ ರೋನಿ ಮೆಂಡೋನ್ಸಾ ಮಾತನಾಡಿ ಮೂಡುಬಿದಿರೆ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದೆ ರೈತರ ಜಮೀನಿಗೆ ಕೊಳಚೆ ನೀರು ತುಂಬಿ ಭತ್ತದ ಬೇಸಾಯಕ್ಕೆ ತೊಂದರೆ ಆಗುತ್ತಿದ್ದು ತಕ್ಷಣ ಒಳಚರಂಡಿ ನಿರ್ಮಾಣ ಮುಖಾಂತರ ಹಣ ಬಿಡುಗಡೆಗೊಳಿಸಬೇಕು. ಮಂಗಳೂರು ಹಾಗೂ ಮೂಡುಬಿದಿರೆ ತಾಲೂಕು ಭಾಗದಲ್ಲಿ ಅತಿಯಾದ ನವಿಲುಗಳ ಉಪಟಳದಿಂದ ಭತ್ತದ ಬೇಸಾಯ ಮತ್ತು ತರಕಾರಿ ಮತ್ತು ಪುಷ್ಪೋದ್ಯಾನಕ್ಕೆ ತೊಂದರೆಯಾಗಿದ್ದು ಜಿಲ್ಲೆಗೆ 1 ನವಿಲು ಪಾರ್ಕ್‌ನ ನಿರ್ಮಾಣ ರೂಪಿಸಬೇಕು ಎಂದು ಲಿಯೋ ವಾಲ್ಟರ್ ನಝರತ್ ಶಾಸಕರಲ್ಲಿ ಮನವಿ ಮಾಡಿದ್ದಾರೆ.
ಸಂಘದ ಗೌರವಾಧ್ಯಕ್ಷ ಸುರೇಶ್ ಕುಮಾರ್ ಎಂ., ಉಪಾಧ್ಯಕ್ಷ ಜಯಾನಂದ ಪೂಜಾರಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಅಮೀನ್‌ನ್ ಮತ್ತು ವಿಠಲ ಪೂಜಾರಿ ಸುದ್ದಿಗೋಷ್ಠಿಯಲ್ಲಿದ್ದರು.

Related posts

Leave a Reply