Header Ads
Breaking News

ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಸಹಯೋಗದಲ್ಲಿ ನಡೆದ ಅಂತರ್ ಕಾಲೇಜು ಕ್ರೀಡಾಕೂಟ

ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಸಹಯೋಗದಲ್ಲಿ ಸ್ವರಾಜ್ ಮೈದಾನದಲ್ಲಿ ನಡೆದ 39ನೇ ಮಂಗಳೂರು ವಿಶ್ವವಿದ್ಯಾನಿಲಯದ ಇಂಟರ್ ಕಾಲೇಜಿಯೇಟ್ ಮತ್ತು ಭಿನ್ನ ಸಾಮಥ್ರ್ಯದ ಮಕ್ಕಳ ಅಥ್ಲೆಟಿಕ್ಸ್ ಚ್ಯಾಂಪಿಯನ್‍ಶಿಪ್‍ನ ಉದ್ಘಾಟನಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಎ. ಎಮ್. ಖಾನ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ್ರು. ಬಳಿಕ ಮಾತನಾಡಿದ ಅವರು, ಕ್ರೀಡೆಯು ದೈಹಿಕ, ಸಾಮಾಜಿಕ ಮಾನಸಿಕ ಸಾಮಥ್ರ್ಯವನ್ನು ವೃದ್ಧಿಸುವುದರ ಜೊತೆಗೆ ವೈಕ್ತಿತ್ವ ವಿಕಾಸನಗೊಳಿಸುತ್ತದೆ. ಕ್ರೀಡಾಕ್ಷೇತ್ರದಲ್ಲಿ ಸೋಲು ಮತ್ತು ಗೆಲುವು ಸಹಜ. ಅವುಗಳು ಜೀವನ ಪಾಠಕ್ಕೆ ಪೂರಕವಾಗಿರುತ್ತದೆ. ಜತೆಗೆ ಪ್ರೋತ್ಸಾಹಿಸುವ ಗುಣವನ್ನು ಕಲಿಸುತ್ತವೆ ಎಂದು ಹೇಳಿದರು.

ಆಳ್ವಾಸ್‍ನ ರಾಷ್ಟ್ರೀಯ ಸಾಧಕ ವಿದ್ಯಾರ್ಥಿಗಳಾದ ಚೈತ್ರಾ ದೇವಾಡಿಗ, ಅಮನ್‍ಅರುಣ್, ಮನು ಡಿ.ಪಿ, ಬಸವರಾಜ್ ಕ್ರೀಡಾಜ್ಯೋತಿ ಬೆಳಗಿಸುವುದರ ಮೂಲಕ ಚ್ಯಾಂಪಿಯನ್‍ಶಿಪ್‍ಗೆ ಚಾಲನೆ ನೀಡಿದರು.

ಕಾರ್ಯಕ್ರಮದಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಅಧ್ಯಕ್ಷಡಾ.ಎಂ ಮೋಹನ್ ಆಳ್ವ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದೈಹಿಕ ಶಿಕ್ಷಣ ಅಧ್ಯಾಪಕರ ಸಂಘದ ಅಧ್ಯಕ್ಷ ಜೇಮ್ಸ್, ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕಿಶೋರ್‍ಕುಮಾರ್ ಸಿ. ಕೆ ಉಪಸ್ಥಿತರಿದ್ದರು.

ಈ ಕ್ರೀಡಾಕೂಟಕ್ಕೆಮಂಗಳೂರು ವಿಶ್ವವಿದ್ಯಾಲಯಕ್ಕೆ ಒಳಪಟ್ಟ 68 ಕಾಲೇಜುಗಳಿಂದ 864 ವಿದ್ಯಾರ್ಥಿಗಳು ಹಾಗೂ 18 ವಿಶೇಷ ಶಾಲೆಗಳಿಂದ ಒಟ್ಟು270 ವಿದ್ಯಾರ್ಥಿಗಳು ಆಗಮಿಸಿದ್ದಾರೆ.

ಭಿನ್ನ ಸಾಮಥ್ರ್ಯ ಮಕ್ಕಳ ಪಥಸಂಚಲನದಲ್ಲಿ ಸೈಂಟ್‍ಆಗ್ನೇಸ್ ವಿಶೇಷ ಶಾಲೆ ಪ್ರಥಮ, ಉಡುಪಿಯ ಮಾನಸಾ ವಿಶೇಷ ಮಕ್ಕಳ ಶಾಲೆ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿತು.

Related posts

Leave a Reply

Your email address will not be published. Required fields are marked *