Header Ads
Header Ads
Breaking News

ಮೂಡುಬಿದಿರೆ ಪುರಸಭಾಧಿವೇಶನ ಪೊಲೀಸ್ ಅಧಿಕಾರಿಗಳ ವಿರುದ್ಧ ಕಮೀಷನರ್‌ಗೆ ದೂರು ಸದಸ್ಯರಿಂದ ಆಗ್ರಹ

 

ಪುರಸಭೆಯ ಅಧಿಕಾರಿಗಳು, ಅಧ್ಯಕ್ಷರು ಹಾಗೂ ಸರ್ವ ಪಕ್ಷಗಳ ಪುರಸಭಾ ಸದಸ್ಯರ ನಿಯೋಗ ಪೋಲಿಸ್ ಠಾಣೆಗೆ ದೂರು ನೀಡಲು ಹೋದಾಗ ಪೋಲಿಸ್ ಅಧಿಕಾರಿಗಳು ದೂರಿಗೂ ಸ್ಪಂದಿಸದೆ ಅಗೌರವ ತೋರಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪುರಸಭಾ ಸದಸ್ಯರು ಪೋಲಿಸ್ ಠಾಣೆಗೆ ವಿದ್ಯುತ್ ಸಂಪರ್ಕ ಮತ್ತು ನೀರಿನ ಸಂಪರ್ಕವನ್ನು ಕಡಿತಗೊಳಿಸಬೇಕು, ಎಲ್ಲಾ ಸದಸ್ಯರು, ಅಧಿಕಾರಿಗಳು ಪೋಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಬೇಕು ಮತ್ತು ಪೋಲೀಸ್ ಕಮಿಷನರ್‌ಗೆ ದೂರು ನೀಡುವ ಬಗ್ಗೆ ಮೂಡುಬಿದಿರೆ ಪುರಸಭಾಧಿವೇಶನದಲ್ಲಿ ಗುರುವಾರ ನಿರ್ಧರಿಸಲಾಯಿತು.
ಪುರಸಭಾಧ್ಯಕ್ಷೆ ಹರಿಣಾಕ್ಷಿ ಎಸ್ ಸುವರ್ಣ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ಸದಸ್ಯ ಕೊರಗಪ್ಪ ಅವರು ಪಾರ್ಶ್ವನಾಥ ಇಂದ್ರ ಎಂಬವರು ಸರ್ಕಾರಿ ಜಾಗವನ್ನು ಅತಿಕ್ರಮಿಸಿ ಅದಕ್ಕೆ ಗೋಡೆ ನಿರ್ಮಿಸಿದ್ದು ಸಾರ್ವಜನಿಕ ರಸ್ತೆಯನ್ನು ಬಂದ್ ಮಾಡಿದ್ದಾರೆ. ಅದನ್ನು ತೆರವುಗೊಳಿಸಲು ಹೋದ ಪುರಸಭಾ ಅಧಿಕಾರಿಗಳ ಕರ್ತವ್ಯಕ್ಕೆ ಅವರು ಅಡ್ಡಿಪಡಿಸಿದ್ದಾರೆ. ಅಧಿಕಾರಿಗಳಿಗೆ ರಕ್ಷಣೆ ನೀಡಲು ತೆರಳಿದ ಪೊಲೀಸರು ಆರೋಪಿಗಳಿಗೆ ಬೆಂಬಲ ನೀಡಿದ್ದಾರೆ. ಅಧಿಕಾರಿಗಳು ನೀಡಿದ ದೂರನ್ನು ದಾಖಲಿಸಲಿಲ್ಲ ಎಂದರು. ಆರೋಪಿ ನೀಡಿದ ದೂರಿನ ಮೇರೆಗೆ ಪುರಸಭೆಯ ಟಿಪ್ಪರ್ ಡ್ರೈವರ್ ಮೇಲೆ ಪೋಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಪೋಲೀಸರ ಈ ತಾರತಮ್ಯ ಧೋರಣೆಯಿಂದಾಗಿ ಪುರಸಭೆಯ ಅಧಿಕಾರಿಗಳು, ನೌಕರರಿಗೆ ಕರ್ತವ್ಯ ನಿರ್ವಹಿಸಲು ಅಸಾಧ್ಯವಾಗುತ್ತಿದೆ. ಅವರಿಗೆ ರಕ್ಷಣೆ ನೀಡುವವರು ಯಾರು? ಎಂದು ಸದಸ್ಯರು ಪಕ್ಷ ಬೇದ ಮರೆತು ಪ್ರಶ್ನಿಸಿದರು.

ಮೂಡುಬಿದಿರೆಯಲ್ಲಿ ಡ್ರಗ್ಸ್, ಗಾಂಜಾ ಎಗ್ಗಿಲ್ಲದೆ ಮಾರಾಟವಾಗುತ್ತಿದೆ. ಮಹಿಳೆಯರು ರಸ್ತೆಯಲ್ಲಿ ನಡೆದಾಡಲು ಸಾಧ್ಯವಿಲ್ಲದಂತಾಗಿದೆ.
ಡ್ರಗ್ಸ್, ಗಾಂಜಾ ಮಾರಾಟಗಾರರಿಂದ ಪೋಲೀಸರು ಲಂಚ ಪಡೆಯುತ್ತಿದ್ದಾರೆ ಎಂದು ಸುರೇಶ್ ಕೋಟ್ಯಾನ್ ಮತ್ತಿತರರು ಆರೋಪಿಸಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಪಿ.ಕೆ ಥೋಮಸ್ ದನಕಳ್ಳರೊಂದಿಗೂ ಪೋಲೀಸರು ಶಾಮೀಲಾಗಿದ್ದಾರೆ ಎಂದು ನೈಜ ಘಟನೆಯನ್ನು ಆಧರಿಸಿ ವಿವರಿಸಿದರು.

Related posts

Leave a Reply