Header Ads
Breaking News

ಮೂಡುಬಿದಿರೆ : ಬಿಜೆಪಿಯಿಂದ ಚುನಾವಣಾ ಪ್ರಣಾಳಿಕೆ ಬಿಡುಗಡೆ

ಮೇ 29ಕ್ಕೆ ನಡೆಯುವ ಮೂಡುಬಿದಿರೆ ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ಬಿಜೆಪಿ ಮಂಡಲ ಅಧ್ಯಕ್ಷ ಈಶ್ವರ್ ಕಟೀಲು ಪಕ್ಷದ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.

ಬಳಿಕ ಮಾಧ್ಯಮ ಜತೆ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಸ್ವಚ್ಚ, ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳತ ಪಕ್ಷದ ಪ್ರಮುಖ ವಿಷಯವಾಗಿದೆ. ಸ್ವಚ್ಚತೆಗೆ ವಿಶೇಷ ಆದ್ಯತೆ ನೀಡಲಾಗುವುದು. ಮನೆ ಮನೆ ಕಸಸಂಗ್ರಹವನ್ನು ಇನ್ನಷ್ಟು ಪರಿಣಾಮಕಾರಿಗೊಳಿಸಲಾಗುವುದು ಮತ್ತು ಕಸ ಸಂಗ್ರಹ ಶುಲ್ಕವನ್ನು ಇಳಿಕೆ ಮಾಡಿ ಸಾರ್ವಜನಿಕರ ಹೊರೆ ಕಡಿಮೆ ಮಾಡಲಾಗುವುದು. ಕುಡಿಯುವ ನೀರು, ದಾರಿದೀಪ, ಸ್ವಚ್ಚತೆ, ಪರವಾನಿಗೆಗಳ ಬಗ್ಗೆ ಸಾರ್ವಜನಿಕರ ಅಹವಾಲು ಸ್ವೀಕರಿಸಲು ದಿನದ 24 ಗಂಟೆ ಕಾರ್ಯಾಚರಿಸುವ ಸಹಾಯವಾಣಿ ಆರಂಭಿಸಲಾಗುವುದು ಎಂದ್ರು.

ಕೇಂದ್ರದಲ್ಲಿ ಮೋದಿ ನೇತ್ರತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಇದರ ಪ್ರಭಾವ ಮೂಡುಬಿದಿರೆ ಪುರಸಭೆ ಚುನಾಶವಣೆ ಮೇಲೆ ಬೀರಲಿದ್ದು ಬಿಜೆಪಿ ಮತಗಳಿಗೆ ವೃದ್ಧಿಯಾಗಿ ಕನಿಷ್ಟ 16 ಸ್ಥಾನಗಳನ್ನು ಗೆದ್ದು ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಈಶ್ವರ್ ಕಟೀಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಆಡಳಿತದ ಪುರಸಭೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದಿಂದಾಗಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಪುರಸಭೆ ಬಗ್ಗೆ ಜನ ರೋಸಿ ಹೋಗಿದ್ದಾರೆ ಎಂದರು.

ಬಿಜೆಪಿಯ ಸುರೇಶ್ ಕುಮಾರ್ ನಗರಾಭಿವೃದ್ಧಿ ಸಚಿವರಾಗಿದ್ದಾಗ ಮೂಡುಬಿದಿರೆ ಪುರಸಭೆಗೆ ಭೇಟಿ ನೀಡಿ ಒಳಚರಂಡಿ ಯೋಜನೆಗೆ ಅಗತ್ಯ ಸಹಕಾರ ನೀಡುವ ಭರವಸೆ ನೀಡಿದ್ದರೂ ಆಗಿನ ಶಾಸಕರು ಮತ್ತು ಪುರಸಭೆ ಆಡಳಿತ ಇದಕ್ಕೆ ಸ್ಪಂದಿಸದಿದ್ದುದರಿಂದ ಒಳಚರಂಡಿ ಯೋಜನೆ ನೆನೆಗುದಿಗೆ ಬೀಳಲು ಕಾರಣ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ. ಆರೋಪಿಸಿದರು.
ಈ ಸಂದರ್ಭ ಬಿಜೆಪಿ ಮುಖಂಡರಾದ ಜಗದೀಶ್ ಅಧಿಕಾರಿ, ಸುಖೇಶ್ ಶೆಟ್ಟಿ, ಹರೀಶ್ ಎಂ.ಕೆ, ಜಿಲ್ಲಾ ಪಂಚಾಯತಿ ಸದಸ್ಯೆ ಕಸ್ತೂರಿ ಪಂಜ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *