Header Ads
Header Ads
Breaking News

ಮೂಡುಬಿದಿರೆ: “ಬೇಟಿ ಬಚಾವೋ ಬೇಟಿ ಪಡಾವೋ” ಜಾಗೃತಿ ಜಾಥಾ

ಬೇಟಿ ಬಚಾವೋ ಬೇಟಿ ಪಡಾವೋ” ಜಾಗೃತಿ ಜಾಥಾವನ್ನು ಮೂಡುಬಿದಿರೆಯ ಸಮಾಜ ಮಂದಿರದಿಂದ ರೋಟರಿ ಶಾಲೆವರೆಗೆ ಜಾಥಾವು ಮೂಡುಬಿದಿರೆ ರೋಟರಿ ಕ್ಲಬ್ ವತಿಯಿಂದ ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ನಡೆಯಿತು.ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಯೋಜನಾಧಿಕಾರಿ ಶ್ಯಾಮಲಾ ಅವರ ಜತೆಗೂಡಿ ರೋಟರಿ ಝೋನ್ 4ರ ಸಹಾಯಕ ರಾಜ್ಯಪಾಲ ಪ್ರಕಾಶ್ ಕಾರಂತ್ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು.
ಈ ಸಂರ್ಭದಲ್ಲಿ ಮಾತನಾಡಿದ ಪ್ರಕಾಶ್ ಕಾರಂತ್ ಮಾತನಾಡಿ, ಪುಟಾಣಿ ಮಕ್ಕಳಲ್ಲಿರುವ ಸೃಜನಾತ್ಮಕ ಪ್ರತಿಭೆಯನ್ನು ಗುರುತಿಸಿ ಯಶಸ್ಸಿಗೆ ಪ್ರೋತ್ಸಾಹಿಸುವವರು ಅಂಗನವಾಡಿ ಶಿಕ್ಷಕಿಯರು. ಮನೆಯಲ್ಲಿ ಒಂದು ಮಗುವವನ್ನು ಸಾಕಲು ಕಷ್ಟಪಡುವ ತಾಯಂದಿರುವ ಅಂಗನವಾಡಿಯಲ್ಲಿ ತಮ್ಮ ಮಕ್ಕಳನ್ನು ಬಿಟ್ಟು ಕೆಲಸಗಳಿಗೆ ಹೋಗುತ್ತಾರೆ. ಅಂಗನವಾಡಿಗಳಲ್ಲಿ ಸುಮಾರು 20 ರಿಂದ 30 ಮಕ್ಕಳನ್ನು ಸಂಬಾಳಿಸುವ ಅಂಗನವಾಡಿ ಶಿಕ್ಷಕಿಯರು ಮಹಾ ಮಾತೆಯರು ಎಂದರು.

ನಂತರ ರೋಟರಿ ಶಾಲೆಯ ಆವರಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗಾಗಿ ನಡೆದ ಆಟೋಟ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ “ಆಶಾ ಸ್ಪೂರ್ತಿ 2019″ನ್ನು ರೋಟರಿ ಅಧ್ಯಕ್ಷ ಡಾ ರಮೇಶ್ ಅವರು ಉದ್ಘಾಟಿಸಿದರು.ಸಿಡಿಪಿಓ ಶ್ಯಾಮಲಾ ಮಾತನಾಡಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಅವಕಾಶವನ್ನು ಮೂಡುಬಿದಿರೆಯ ರೋಟರಿ ಕ್ಲಬ್ ನೀಡಿರುವುದು ಶ್ಲಾಘನೀಯ ಎಂದರು.ರೋಟರಿ ಕ್ಲಬ್‌ನ ಕಾರ್ಯದರ್ಶಿ ಸಿ.ಹೆಚ್.ಗಫೂರ್, ಮೂಡುಬಿದಿರೆ ವಲಯದ ಮೇಲ್ವೀಚಾರಕಿ ಕಾತ್ಯಾಯಿನಿ, ಕಲ್ಲಮುಂಡ್ಕೂರು ವಲಯದ ಭಾರತಿ, ಶಿರ್ತಾಡಿ ವಲಯದ ರತಿ ಶೆಟ್ಟಿ ಹಾಗೂ ಬೆಳುವಾಯಿ ವಲಯದ ಶುಭ, ಮೂಡುಬಿದಿರೆ ವಲಯದ ಸಭಾಪತಿ ಸೂರಜ್ ಬನ್ನಡ್ಕ, ಅವಿಲ್ ಡಿಸೋಜಾ ಅವರು ಉಪಸ್ಥಿತರಿದ್ದರು.

Related posts

Leave a Reply