Header Ads
Breaking News

ಮೂಡುಬಿದಿರೆ ಮಾರ್ಕೆಟ್ ನಲ್ಲಿ ಕೆ.ಪಿ. ಮೋಹನ್‌ದಾಸ್ ನೇತೃತ್ವದಲ್ಲಿ ಜಂಟಿ ಸಮೀಕ್ಷೆ

ಇಲ್ಲಿನ ಪುರಸಭಾ ಮಾರುಕಟ್ಟೆಯ ಜಂಟಿ ಸಮೀಕ್ಷೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ನೀಡಿದ ಆದೇಶದ ಮೇರೆಗೆ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಬೆಂಗಳೂರು ವೃತ್ತದ ಉಪ ಪುರಾತತ್ವಶಾಸ್ತ್ರಜ್ಞ ಅಧೀಕ್ಷಕ ಕೆ.ಪಿ. ಮೋಹನ್‌ದಾಸ್ ಅವರ ನೇತೃತ್ವದಲ್ಲಿ ಜಂಟಿ ಸಮೀಕ್ಷೆ ನಡೆಯಿತು.
ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರ ಜೈಸನ್ ತಾಕೊಡೆ ಮತ್ತು ಪುರಸಭಾ ಮುಖ್ಯಾಧಿಕಾರಿ ಇಂದು ಎಂ. ಅವರು ಸಮ್ಮುಖದಲ್ಲಿ ಸಂರಕ್ಷಿತ ಸ್ಮಾರಕವಾದ ಮೂಡುಬಿದಿರೆ ಅರಮನೆಯಿಂದ, ಮೂಡುಬಿದಿರೆ ಮಾರುಕಟ್ಟೆ ಕಟ್ಟಡದ ಅಂತರವನ್ನು ಜಿಪಿಎಸ್ ಆಧಾರಿತ ಮಾಪನಾ ಯಂತ್ರದ ಮೂಲಕ ಅಳೆಯಲಾಯಿತು.
ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸರ್ವೇಯರ್ ಮುರಳಿ ಮೋಹನ್, ಕಾರ್ಕಳ ಸಬ್‌ಸರ್ಕಲ್ ಸಂರಕ್ಷಣಾ ಸಹಾಯಕ ಗೋಕುಲ್, ಸ್ಮಾರಕ ರಕ್ಷಕ್ ಆರ್.ಎನ್. ನಾಯಕ್ ಜಂಟಿ ಸರ್ವೆಯಲ್ಲಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *