Header Ads
Breaking News

ಮೂಡುಬಿದಿರೆ : ಮೆಣಸಿನ ಹುಡಿ ಎರಚಿ ದರೋಡೆ

ಮೂಡುಬಿದಿರೆ ತಾಲೂಕಿನ ತೋಡಾರು ಮತ್ತು ಗಾಂಧಿನಗರದಲ್ಲಿರುವ ಎರಡು ಮನೆಗಳಿಗೆ ಕಲ್ಲು ಎಸೆದಿದ್ದಲ್ಲದೆ ಅಂಗಳದಲ್ಲಿದ್ದ ಕಾರು ಮತ್ತು ಓಮ್ನಿ ವಾಹನಗಳನ್ನು ಹಾನಿಗೊಳಿಸಿ ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ.
ತೋಡಾರಿನ ಅರುಣ್ ಎಂಬವರ ಮನೆಗೆ ಕಲ್ಲು ಎಸೆದು ಮತ್ತು ಅಂಗಳದಲ್ಲಿದ್ದ ಕಾರಿನ ಹಿಂಬದಿಯ ಗ್ಲಾಸಿಗೆ ಮತ್ತು ಗಾಂಧಿನಗರದ ಹರೀಶ್ಚಂದ್ರ ನಾಯ್ಕ್ ಎಂಬವರ ಮನೆಗೆ ಕಲ್ಲು ಎಸೆದು ಮತ್ತು ಬಾಗಿಲಿಗೆ ಕಾಲಿನಿಂದ ಒದ್ದಿದ್ದಾರೆ ಮತ್ತು ಅಂಗಳದಲ್ಲಿದ್ದ ಓಮ್ನಿ ಕಾರಿನ ಗ್ಲಾಸನ್ನು ಪುಡಿ ಮಾಡಿ ಒಳಗಡೆ ಇದ್ದ ನಾಲ್ಕು ಸಾವಿರ ಹಣವನ್ನು ದೋಚಿದ್ದಾರೆ. ಎರಡೂ ಕಡೆಯಲ್ಲೂ ಕಲ್ಲು ಹೊಡೆದ ಶಬ್ದಕ್ಕೆ ಮನೆಯವರು ಎದ್ದು ಬೊಬ್ಬೆ ಹಾಕಿದಾಗ ಕಳ್ಳರು ವಾಹನದಲ್ಲಿ ಪರಾರಿಯಾಗಿದ್ದಾರೆ. ಕಡಂದಲೆಯ ಬಿ.ಟಿ ರೋಡಿನಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ಸವಾರನಿಗೆ ತಲವಾರು ತೋರಿಸಿ ಹೆದರಿಸಿ ಮೆಣಸಿನ ಹುಡಿ ಎರಚಿ ಆತನಲ್ಲಿದ್ದ ನಗದು ಮತ್ತು ಬೈಕನ್ನು ತೆಗೆದುಕೊಂಡು ಹೋಗಿದ್ದಾರೆ. ಪ್ರಕರಣ ಮೂಡುಬಿದಿರೆ ಠಾಣೆಯಲ್ಲಿ ದಾಖಲಾಗಿದ್ದು ತನಿಖೆ ಆರಂಭಿಸಿದ್ದಾರೆ.ಪ್ರಕರಣ ನಡೆದಿರುವ ಮೂರು ಕಡೆಗಳಿಗೂ ಪೊಲೀಸ್ ಕಮೀಷನರ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸಿದ್ದಾರೆ. ಮೂಡುಬಿದಿರೆ ಪೊಲೀಸ್ ನಿರೀಕ್ಷಕ ದಿನೇಶ್ ಕುಮಾರ್ ಬಿ.ಎಸ್, ಉಪ ನಿರೀಕ್ಷಕ ಸುದೀಪ್, ಅಪರಾಧ ತಡೆ ವಿಭಾಗದ ಪೊಲೀಸರು ತನಿಖೆಯಲ್ಲಿ ಪಾಲ್ಗೊಂಡಿದ್ದಾರೆ.

Related posts

Leave a Reply

Your email address will not be published. Required fields are marked *