Header Ads
Header Ads
Breaking News

ಮೂಡುಬಿದಿರೆ ಮೆಸ್ಕಾಂ ಜನಸಂಪರ್ಕ ಸಭೆ

ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ಮೆಸ್ಕಾಂ ವತಿಯಿಂದ ಭೂಗತ ಕೇಬಲ್ ಅಳವಡಿಕೆ ಕಾರ್‍ಯ ನಡೆಯುತ್ತಿದ್ದು ಸರಿಯಾದ ಮಾನದಂಡಗಳನ್ನು ಪಾಲಿಸಿಲ್ಲ. ವರ್ತುಲ ರಸ್ತೆಯ ಅಂಚಿನಲ್ಲಿಯೇ ಕೇಬಲ್ ಹಾದು ಹೋಗಿರುವುದರಿಂದ ಚರಂಡಿ ನಿರ್ಮಿಸದಂತಹ ಸ್ಥಿತಿ ಉಂಟಾಗಿದೆ ಎಂದು ರೆಕ್ಸನ್ ಮಿರಾಂದ ಅಧಿಕಾರಿಗಳನ್ನು ಪ್ರಶ್ನಿಸಿದರು.ಅಳಿಯೂರು ಶಿರ್ತಾಡಿ ಪರಿಸರದಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಉಂಟಾಗುತ್ತಿರುವ ಕುರಿತು ಸುಭಾಶ್ ಚೌಟ ಹಾಗೂ ಅರುಣ್ ಶೆಟ್ಟಿ ಪ್ರಶ್ನಿಸಿದ್ದರು. ಮೂಡುಬಿದಿರೆ ಸಬ್‌ಸ್ಟೇಷನ್‌ನಲ್ಲಿ ಒತ್ತಡ ಜಾಸ್ತಿ ಇದ್ದು ಇದನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಶಿರ್ತಾಡಿ ಮತ್ತು ಕಡಲಕೆರೆಯಲ್ಲಿ ಪ್ರತ್ಯೇಕ ಸಬ್ ಸ್ಟೇಶನ್ ನಿರ್ಮಿಸಲು ಕೆಪಿಟಿಸಿಎಲ್‌ಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಮಂಜೂರಾತಿ ದೊರೆತಲ್ಲಿ ಹೆಚ್ಚಿನ ಸಮಸ್ಯೆ ನಿವಾರಣೆಯಾಗಲಿದೆ ಎಂದು ಅಧಿಕಾರಿ ತಿಳಿಸಿದರು.ರೈತರು ತಮ್ಮ ಜಮೀನಿನೊಳಗೆ ಫಾರ್ಮ್ ಹೌಸ್ ನಿರ್ಮಿಸಿದರೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮೆಸ್ಕಾಂ ಅಧಿಕಾರಿಗಳು ಪಂಚಾಯತ್‌ನ ನಿರಾಕ್ಷೇಪಣಾ ಪತ್ರ ಕೇಳುತ್ತಾರೆ. ಪಂಚಾಯತ್‌ನವರು ಡೋರ್ ನಂಬರ್ ಪಡೆಯಬೇಕೆಂದು ಹೇಳುತ್ತಾರೆ. ಈ ದ್ವಂದ್ವದಿಂದಾಗಿ ಫಾರ್ಮ್ ಹೌಸ್‌ಗೆ ವಿದ್ಯುತ್ ಸಂಪರ್ಕವಿಲ್ಲದಂತಾಗುತ್ತದೆ. ಎಂದು ವಿಲ್ಪ್ರೆಡ್ ಮೆಂಡೋನ್ಸಾ ಮತ್ತು ಆಲ್ವಿನ್ ಮಿನೇಜಸ್ ಮೆಸ್ಕಾಂ ಸಮಾಜಮಂದಿರದಲ್ಲಿ ನಡೆದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದರು.ಮಂಗಳೂರು ವೃತ್ತದ ಎಕ್ಸಿಕ್ಯೂಟಿವ್ ಇಂಜಿನಿಯರ್ ಪುಷ್ಪ ಉಪಸ್ಥಿತರಿದ್ದರು.

Related posts

Leave a Reply