Header Ads
Header Ads
Breaking News

ಮೂಡುಬಿದಿರೆ: ಯಕ್ಷಧ್ರುವ ಪಟ್ಲ ಫೌಂಡೇಶನ್‍ ಘಟಕದ ತೃತೀಯ ವಾರ್ಷಿಕೋತ್ಸವ

ಮೂಡುಬಿದಿರೆ : ಯಕ್ಷಧ್ರುವ ಪಟ್ಲ ಫೌಂಡೇಶನ್‍ನ ಮೂಡುಬಿದಿರೆ ಘಟಕದ ತೃತೀಯ ವರ್ಷದ ವಾರ್ಷಿಕೋತ್ಸವವು ಮೂಡುಬಿದಿರೆ ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಜರಗಿತು.

ದೇವಳದ ಪ್ರಧಾನ ಅರ್ಚಕ, ಆಡಳಿತ ಮೊಕ್ತೇಸರ ವೇದ ಮೂರ್ತಿ ಈಶ್ವರ ಭಟ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಕಲೆಯನ್ನು ಧರ್ಮ ಪ್ರಸಾರ ಸಾಧನವಾಗಿ ಮುನ್ನಡೆಸುತ್ತ ಬರುತ್ತಿರುವವರು ಯಕ್ಷಗಾನ ಕಲಾವಿದರ ಸಂಕಷ್ಟಗಳಿಗೆ ಸ್ಪಂದಿಸುವ, ಸಾಧಕರನ್ನು ಗೌರವಿಸುವ ಸಹೃದಯತೆಯಿಂದ ಕೆಲಸ ಮಾಡುತ್ತಿರುವ ಪಟ್ಲ ಫೌಂಡೇಶನ್ ನಿಜಕ್ಕೂ ಕಲೆಯ ಉಳಿವು ಮತ್ತು ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುತ್ತಿದೆ’ ಎಂದು ಅವರು ಹರಸಿದರು.

ಫೌಂಡೇಶನ್‍ನ ಸ್ಥಾಪಕಾಧ್ಯಕ್ಷ, ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, `ಸಂಪತ್ತಿರುವುದು ದಾನಕ್ಕೆ, ಬಡತನವಿರುವುದು ಧ್ಯಾನಕ್ಕೆ’ ಎಂದುಚ್ಚರಿಸಿ ವ್ಯವಸ್ಥಿತವಾದ ಯೋಜನೆಗೆ ಕಲಾಭಿಮಾನಿಗಳು ಖಂಡಿತ ಸ್ಪಂದಿಸುತ್ತಾರೆ ಎಂಬುದಕ್ಕೆ ಫೌಂಡೇಶನ್ ಸಾಕ್ಷಿಯಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ  ಪಟ್ಲ  ಫೌಂಡೇಶನ್‍ನ ಕೇಂದ್ರ ಸಮಿತಿಯ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ,ಮಾರೂರು ಖಂಡಿಗ ರಾಮದಾಸ ಆಸ್ರಣ್ಣ, ಮಾಜಿ ಸಚಿವರಾದ ಕೆ. ಅಮರನಾಥ ಶೆಟ್ಟಿ, ಕೆ. ಅಭಯಚಂದ್ರ, ಬಿಜೆಪಿ ದ.ಕ. ಜಿಲ್ಲಾ  ಉಪಾಧ್ಯಕ್ಷ   ಕೆ.ಪಿ. ಜಗದೀಶ ಅ„ಕಾರಿ, ಪಟ್ಲ ಫೌಂಡೇಶನ್‍ನ ಗುಜರಾತ್ ಘಟಕದ ಅಧ್ಯಕ್ಷ ಅಪ್ಪಣ್ಣ ಶೆಟ್ಟಿ ಭಾಗವಹಿಸಿದ್ದರು.

Related posts

Leave a Reply