Header Ads
Breaking News

ಮೂಡುಬಿದಿರೆ : ಯುವಕ ನಾಪತ್ತೆ

ಮೂಡುಬಿದಿರೆ, : ತೋಡಾರು ಗ್ರಾಮದ ನಿವಾಸಿ, ಶ್ರೀನಿವಾಸ ಅವರ ಪುತ್ರ ೨೨ರ ಹರೆಯದ ತಿಲಕ್ ಎಂಬವರು ಮೇ ೧೧ರಂದು ಹಂಡೇಲು ಮೈಟ್ ಕಾಲೇಜಿನ ಪಕ್ಕದ ದೈವಸ್ಥಾನದ ಬ್ರಹ್ಮಕಲಶೋತ್ಸವಕ್ಕೆಂದು ಹೋದವರು ಮನೆಗೆ ಬಾರದೆ, ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿರುವುದಾಗಿ ಅವರ ಅಣ್ಣ ಶೃತಿನ್ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಎಣ್ಣೆ ಕಪ್ಪು ಮೈಬಣ್ಣ, 5 ಅಡಿ 5 ಇಂಚು ಎತ್ತರ, ಸಾಧಾರಣ ದಪ್ಪ ಶರೀರ, ಕಪ್ಪು ಕೂದಲು ಹೊಂದಿರುವ ತಿಲಕ್ ಇಲ್ಲಿಂದ ಹೋಗುವಾಗ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಕಪ್ಪು ಮತ್ತುವ ಬಿಳಿ ಮಿಶ್ರಿತ ಗೆರೆಗಳಿರುವ ತುಂಬು ತೋಳಿನ ಶರ್ಟ್ ಧರಿಸಿದ್ದು ಕನ್ನಡ , ತುಳು ಮಾತನಾಡಬಲ್ಲ ರು. ಇವರ ಪತ್ತೆಯಾದಲ್ಲಿ ಮೂಡಬಿದಿರೆ ಠಾಣೆ (೦೮೨೫೮-೨೩೬೩೩೬) ಅಥವಾ ಪೊಲೀಸ್ ಆಯುಕ್ತರು (೦೮೨೪-೨೨೨೦೮೦೧, ೨೨೨೦೮೦೦) ಇವರಿಗೆ ತಿಳಿಸಬೇಕಾಗಿ ಪೊಲೀಸ್ ಪ್ರಕಟನೆ ತಿಳಿಸಿದೆ.