Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ಮೂಡುಬಿದಿರೆ ರೋಟರಿ ಕ್ಲಬ್‌ನ ಸುವರ್ಣ ಮಹೋತ್ಸವ ರೋಟರಿ ಪದವಿಪೂರ್ವ ಕಾಲೇಜ್ ಆವರಣದಲ್ಲಿ ಕಾರ್ಯಕ್ರಮ

ಮೂಡುಬಿದಿರೆ: ಕಳೆದ 50 ವರ್ಷಗಳಿಂದ ಸಾಮಾಜಿಕ, ಆರ್ಥಿಕ ಸೇವೆಯನ್ನು ನೀಡುತ್ತಾ ಬಂದಿರುವ ಮೂಡುಬಿದಿರೆಯ ರೋಟರಿ ಕ್ಲಬ್‌ನ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದ್ದು ಇದರ ಸಂಭ್ರಮಾಚರಣೆಯ ಸಮಾರಂಭವನ್ನು ರೋಟರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ವಿಜೃಂಭಣೆಯಿಂದ ನಡೆಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಸುವರ್ಣ ಸಂಭ್ರಮದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ವಿವಿಧ ಸಾಮಾಜಿಕ ಸಮಾಜದಲ್ಲಿ ಅಂತಸ್ತಿನ, ಸಂಪತ್ತಿನ, ಅಧಿಕಾರ ಬೇಧಗಳಿವೆ. ಆದರೆ ರೋಟರಿಯಂತಹ ಸಂಸ್ಥೆಗಳು ಸಮಾಜದಲ್ಲಿ ಸಮಾನತೆಯನ್ನು ಸೃಷ್ಟಿಸುತ್ತಿವೆ. ಸೇವೆಯಲ್ಲಿ ಪರಿವರ್ತನೆ, ಹೊಸತನ ತಂದಿರುವ ರೋಟರಿ ಸಂಸ್ಥೆಯು ವ್ಯಕ್ತಿಯನ್ನು ಬೆಳೆಸಿ, ವ್ಯಕ್ತಿತ್ವವನ್ನು ಬೆಳಗಿಸುತ್ತದೆ. ರೋಟರಿ ಸೇವಾ ಚಟುವಟಿಕೆಗಳ ಮೂಲಕ ಮಾನಸಿಕ ಪರಿವರ್ತನೆಯಾಗಿ ಹೃದಯ ವಿಶಾಲತೆ, ಚಿಂತನಾ ವಿಶಾಲತೆ, ಬೌದ್ಧಿಕ ವಿಶಾಲತೆ ಹೆಚ್ಚಾಗಿ ಸ್ವಾಭಿಮಾನ ಬದುಕು ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್ ನಝೀರ್ ಮಾತನಾಡಿ, ರೋಟರಿಯ ವಿವಿಧ ಸಮಾಜ ಸೇವಾ ಯೋಜನೆಗಳ ಲೋಕಾರ್ಪಣೆಗೊಳಿಸಿದರು. ವಿಭಿನ್ನ ರೀತಿಯ ಚಿಂತನೆ ಹಾಗೂ ಸವಾಲುಗಳನ್ನು ಎದುರಿಸುವ ಶಕ್ತಿ ಇದ್ದರೇ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ. ಶಿಕ್ಷಣದ ಮೂಲಕ ನಮ್ಮ ಪ್ರತಿಭೆ, ಕೌಶಲ್ಯಗಳನ್ನು ವೃದ್ಧಿಸಬಹುದು. ಶಿಕ್ಷಣ ಮನಸ್ಸಿಗೆ ತರಬೇತು ನೀಡಬೇಕೇ ಹೊರತು, ಅದು ಮೆದುಳಿಗೆ ವಿಷಯ ತುಂಬಿಸುವಂತಿರಬಾರದು. ರೋಟರಿ ಸಂಸ್ಥೆಯಲ್ಲಿ ತೊಡಗಿಸುವುದರ ಮೂಲಕ ಸಾಮಾಜಿಕ ಕಾಳಜಿಯೊಂದಿಗೆ ವೃತ್ತಿ-ಪ್ರವೃತ್ತಿಯಲ್ಲಿ ಕೂಡ ಸಕರಾತ್ಮಕ ಬದಲಾವಣೆ ತರಲು ಸಾಧ್ಯ ಎಂದರು.

ಪಟ್ಟಾಭಿಷೇಕ ಸುವರ್ಣಮಹೋತ್ಸವ ಸಂಭ್ರಮದಲ್ಲಿರುವ ಡಾ.ಡಿ ವೀರೇಂದ್ರ ಹೆಗ್ಗಡೆ ಅವರನ್ನು ಮೂಡುಬಿದಿರೆ ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ರಾಜ್ಯ ಉಚ್ಛನ್ಯಾಯಾಲಯದ ನ್ಯಾಯಾಧೀಶೆ ಬಿ.ವಿ. ನಾಗರತ್ನ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರೋಟರಿ ಜಿಲ್ಲೆ 2181 ರ ರಾಜ್ಯಪಾಲ ಸುರೇಶ್ ಚೆಂಗಪ್ಪ ’ ಸುವರ್ಣ ಮಹೋತ್ಸವ ವಿಶೇಷ ಸಂಚಿಕೆ ‘ಸುವರ್ಣ ಪಥ” ವನ್ನು ಬಿಡುಗಡೆಗೊಳಿಸಿದರು., ಸ್ಥಾಪಕ ಸದಸ್ಯರಾದ ಡಾ.ಎಲ್.ಸಿ. ಸೋನ್ಸ್, ಡಾ. ರತ್ನಾಕರ ಶೆಟ್ಟಿ, ಮಾಜಿ ಸಚಿವ, ಮೂಡುಬಿದಿರೆ ರೋಟರಿ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ, ಅವರನ್ನು ಸನ್ಮಾನಿಸಲಾಯಿತು.

ರೋಟರಿ ಕ್ಲಬ್ ಮೂಡುಬಿದಿರೆಯ ಪೂರ್ವಾಧ್ಯಕ್ಷರುಗಳನ್ನು ಗೌರವಿಸಲಾಯಿತು. ಮೂಡುಬಿದಿರೆ ರೋಟರಿ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ವಿನ್ಸೆಂಟ್ ಡಿ’ಕೋಸ್ತ, ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್, ಸ್ಮರಣ ಸಂಚಿಕೆಗೆ ಹೆಸರು ಸೂಚಿಸಿದ ಜೆ.ಜೆ ಪಿಂಟೊ ಅವರನ್ನು ಗೌರವಿಸಲಾಯಿತು.

ಶಾಸಕ ಕೆ. ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ರೋಟರಿ ಅಸಿಸ್ಟೆಂಟ್ ಗವರ್ನರ್ ಎ.ಎಂ. ಕುಮಾರ್, ಮಂಗಳೂರು ರೋಟರಿ ಕ್ಲಬ್ ಅಧ್ಯಕ್ಷ ಎಸ್. ವಸಂತ ಶೆಣೈ, ಮುಖ್ಯ ಅತಿಥಿಗಳಾಗಿದ್ದರು. ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಮೂಡುಬಿದಿರೆ ರೋಟರಿ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ನಾರಾಯಣ ಪಿ.ಎಂ, ಉಪಾಧ್ಯಕ್ಷ ಎ.ಕೆ.ರಾವ್, ಮೂಡುಬಿದಿರೆ ರೊ

ಮೂಡುಬಿದಿರೆ ರೋಟರಿ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ನಾರಾಯಣ ಪಿ.ಎಂ ಸುವರ್ಣ ಮಹೋತ್ಸವ ಸಮಿತಿ ಉಪಾಧ್ಯಕ್ಷ ಎ.ಕೆ.ರಾವ್ ಉಪಸ್ಥಿತರಿದ್ದರು.

Related posts

Leave a Reply