Header Ads
Header Ads
Breaking News

ಮೂಡುಬಿದಿರೆ ವೆಂಕಟರಮಣ ದೇವಳದಲ್ಲಿ ಏಕಾಹ ಭಜನೆ

ಮೂಡುಬಿದಿರೆ: ಮೂಡುವೇಣುಪರ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ಏಕಾಹ ಭಜನೆ ಪ್ರಾರಂಭಗೊಂಡಿದೆ. ವಿವಿಧ ಭಜನಾ ಮಂಡಳಿಗಳು ಭಜನೆ ಸಂಕೀರ್ತನೆ ನಡೆಸಿದವು.
ಸಂಕೀರ್ತನಾ ಭಜನಾ ಮಂಡಳಿ, ಲಕ್ಷ್ಮೀ ವೆಂಕಟೇಶ ಭಜನಾ ಮಂಡಳಿ, ಭಜಕ ವೃಂದ, ವೈದಿಕ ವೃಂದದ ಸದಸ್ಯರು ಭಜನೆ ಹಾಡಿದರು.

ದೇವಸ್ಥಾನದ ಪ್ರಾಂಗಣದಲ್ಲಿ ಸುಧೇಶ್ ಭಟ್ ಅವರ ಕೈಚಳಕದಲ್ಲಿ ಮೂಡಿಬಂದಿರುವ ತಿರುಮಲ ತಿರುಪತಿಯ ರಂಗೋಲಿ ದೇವಸ್ಥಾನಕ್ಕೆ ಬರುವ ಭಕ್ತರ ಗಮನಸೆಳೆದಿದೆ. ಸುಧೇಶ್ ಭಟ್ ಅವರು ಮಂಗಳವಾರ ರಾತ್ರಿ ರಂಗೋಲಿ ಬಿಡಿಸಿದ್ದು, ವಿಶೇಷ ರೀತಿಯಲ್ಲಿ ಮೂಡಿಬಂದಿದೆ.

ದೇವಳದ ಆಡಳಿತ ಮೊಕ್ತೇಸರ ಜಿ.ಉಮೇಶ್ ಪೈ, ಮೊಕ್ತೇಸರರಾದ ರಾಮನಾಥ ಭಟ್, ಟಿ.ರಘುವೀರ್ ಶೆಣೈ, ಭಜನಾಮಂಡಳಿಯ ಅಧ್ಯಕ್ಷ ಎಂ.ನಾಗೇಂದ್ರ ಭಟ್ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

Related posts

Leave a Reply