Header Ads
Breaking News

ಮೂಡುಬಿದಿರೆ : ಸಮಾಜ ಮಂದಿರ ಸಭಾದ 74ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕøತಿಕ ಉತ್ಸವ

ಮೂಡುಬಿದಿರೆ : ದೇವೇಗೌಡರು ತೆರೆದಿದ್ದ 34 ಮೊರಾರ್ಜಿ ಶಾಲೆಗಳು ನಿಜಕ್ಕೂ ಆದರ್ಶ ಕನ್ನಡ ಮಾಧ್ಯಮ ಶಾಲೆಗಳಾಗಿದ್ದವು. ಆದರ ನಂತರ ಮಣ್ಣಿನ ಮಕ್ಕಳು ಎಂದು ಹೇಳಿಕೊಂಡವರು ನಿಜಕ್ಕೂ ಮನಸ್ಸು ಮಾಡಿದ್ದರೆ ಈ ಶಾಲೆಗಳ ಸಂಖ್ಯೆ ಹತ್ತು ಪಟ್ಟಾಗಬೇಕಿತ್ತು. ಆದರೆ, ಇರುವ 34 ಶಾಲೆಗಳನ್ನೂ ಆಂಗ್ಲಮಾಧ್ಯಮ ಶಾಲೆಗಳನ್ನಾಗಿಸಿ ಕನ್ನಡ ಮಾಧ್ಯಮ ಶಾಲೆಗಳ ಭವಿಷ್ಯವನ್ನು ಮುಗಿಸುತ್ತಿದ್ದಾರೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರು ಅಭಿಪ್ರಾಯಪಟ್ಟರು. ಅವರು ಸಮಾಜ ಮಂದಿರ ಸಭಾದ 74 ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕøತಿಕ ಉತ್ಸವದ ಸಮಾರೋಪ ಸಮಾರಂಭದಲ್ಲಿ `ಸ ಶಿಕ್ಷಣ-ಆತಂಕದ ನಡೆಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.ಎಪ್ಪತ್ತೈದು ತುಂಬಿರುವ ಹಿರಿಯ ಸಾಹಿತಿ, ಸಂಘಟಕ, ಕಾಂತಾವರ ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ| ನಾ. ಮೊಗಸಾಲೆ ಅವರಿಗೆ ಸಭಾದ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಅವರು ಸಮಾಜ ಮಂದಿರ ಪುರಸ್ಕಾರ-2019’ನ್ನು ಪ್ರದಾನಗೈದರು. ಈ ಸಂದರ್ಭ ದಸರಾ ಸಮಿತಿ ಸಂಚಾಲಕ ಡಾ| ಪುಂಡಿಕಾೈ ಗಣಪಯ್ಯ ಭಟ್, ಸಂಚಾಲಕ ಎಂ. ಗಣೇಶ ಕಾಮತ್, ಉಪಸ್ಥಿತರಿದ್ರು.

Related posts

Leave a Reply

Your email address will not be published. Required fields are marked *