Header Ads
Header Ads
Header Ads
Breaking News

ಮೂಡುಬಿದಿರೆ ಹೋಬಳಿ ರೈತ ಸಂಪರ್ಕ ಕೇಂದ್ರ ಉದ್ಘಾಟನೆ

ಮೂಡುಬಿದಿರೆಯ ಸ್ವರಾಜ್ಯ ಮೈದಾನದ ಬಳಿ ಕೃಷಿ ಇಲಾಖೆಯಿಂದ ದ.ಕ. ಜಿ.ಪಂ. ಇಂಜಿನಿಯರಿಂಗ್ ವಿಭಾಗದವರಿಂದ ರೂ. 48 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ `ರೈತ ಸಂಪರ್ಕ ಕೇಂದ್ರ’ವನ್ನು ಶಾಸಕ ಉಮಾನಾಥ ಕೋಟ್ಯಾನ್ ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಕರಾವಳಿ ಪ್ಯಾಕೇಜ್‍ನಡಿ ಯಂತ್ರೋಪಕರಣ ಉಪಯೋಗಿಸುವವರಿಗೆ ಸಹಾಯಧನ ನೀಡುವ ಜೊತೆಗೆ ಸಾಂಪ್ರದಾಯಿಕ ಕ್ರಮಗಳನ್ನೂ ಅನುಸರಿಸುವವರನ್ನೂ ಗುರುತಿಸುವಂತಾಗಲು ಪ್ರಯತ್ನಿಸಲಾಗುವುದು ಎಂದರು. ಕೃಷಿ ಇಲಾಖಾ ಜಿಲ್ಲಾ ಜಂಟಿ ನಿರ್ದೇಶಕಿ ಸೀತಾ ಎಂ. ಮಾತನಾಡಿ, `ರೈತ ಸಂಪರ್ಕ ಕೇಂದ್ರವು ಏಕ ಗವಾಕ್ಷಿ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿದೆ ಎಂದರು. ಗುತ್ತಿಗೆದಾರ ಸಂತೋಷ್ ಕುಮಾರ್ ಹೆಗ್ಡೆ ಹಾಗೂ ಪಂಚಾಯತ್ ರಾಜ್ ಇಂಜಿನಿಯರ್ ಜಗದೀಶ್ ಶೆಟ್ ಅವರನ್ನು ಸನ್ಮಾನಿಸಲಾಯಿತು.

ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯರಾದ ಕೆ.ಪಿ ಸುಚರಿತ ಶೆಟ್ಟಿ, ಕೆ.ಪಿ. ಸುಜಾತಾ, ರಾಜ್ಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಎಸ್.ಡಿ. ಸಂಪತ್ ಸಾಮ್ರಾಜ್ಯ, ಪುರಸಭಾ ಸದಸ್ಯ ರಾಜೇಶ್ ನಾಯ್ಕ, ತಾ. ಪಂ. ಸದಸ್ಯರಾದ ನಾಗವೇಣಿ, ರೇಖಾ ಸಾಲ್ಯಾನ್, ಪ್ರಶಾಂತ್ ಅಮೀನ್, ರಾಜ್ಯ ಕ್ರೈಸ್ತ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಜೋಯ್ಲಸ್ ಡಿ’ಸೋಜ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರದೀಪ್ ಡಿಸೋಜ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್ ರೋಹಿದಾಸ್, ಮೂಡುಬಿದಿರೆ ಪುರಸಭಾ ಮುಖ್ಯಾಧೀಕಾರಿ ಇಂದೂ ಮೊದಲಾದವರು ಪಾಲ್ಗೊಂಡಿದ್ದರು. ಫಲಾನುಭವಿಗಳಿಗೆ ಮಣ್ಣು ಆರೋಗ್ಯ ಕಾರ್ಡ್, ಸ್ಪ್ರಿಂಕ್ಲರ್ ಸೆಟ್, ಪೈಪ್, ಪವರ್ ವೀಡರ್, ಪವರ್ ಸ್ಪ್ರೇಯರ್, ಬ್ಯಾಕ್ ಸ್ಪ್ರೇಯರ್ ವಿತರಿಸಲಾಯಿತು.

Related posts

Leave a Reply

Your email address will not be published. Required fields are marked *