Header Ads
Breaking News

ಮೂಡುಬಿದ್ರೆ : ಸಿಡಿಲು ಬಡಿದ ಪರಿಣಾಮವಾಗಿ ಮನೆಗೆ ಹಾನಿ

ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಕರಿಂಜೆ ಗ್ರಾಮ ಪಡ್ಡೋಡಿ ಬಳಿಯ ಜನಾರ್ದನ ಗೌಡ ಎಂಬವರ ಮನೆಗೆ ನಿನ್ನೆ ಸಂಜೆ ಸಿಡಿಲು ಬಡಿದ ಪರಿಣಾಮವಾಗಿ ಮನೆಗೆ ಹಾನಿಯಾಗಿ ಅಧಿಕ ನಷ್ಟ ಸಂಭವಿಸಿದೆ..ಮೂಡುಬಿದಿರೆ ಪರಿಸರದಲ್ಲಿ ಬುಧವಾರ ಸಂಜೆ ಗುಡುಗು ಸಹಿತ ಮಳೆ ಬಂದಿದ್ದು ಈ ಸಂದರ್ಭದಲ್ಲಿ ಘಟನೆ ನಡೆದಿದೆ. ಸಿಡಿಲು ಮೊದಲಿಗೆ ಮರಕ್ಕೆ ಬಡಿದು ನಂತರ ಮನೆಗೆ ಬಡಿದ ಪರಿಣಾಮವಾಗಿ ಮನೆಯ ವಿದ್ಯುತ್ ಸಂಪರ್ಕ, ನೆಲಕ್ಕೆ ಮತ್ತು ಗ್ಯಾಸ್ ನ ಒಲೆಗೆ ಹಾನಿಯಾಗಿದೆ..ಈ ಸಂದರ್ಭ ಮನೆ ಮಂದಿ ಕೆಲಸಕ್ಕೆ ಹೋಗಿದ್ದರಿಂದ ಪ್ರಾಣ ಹಾನಿಯಾಗಿಲ್ಲ. ಸ್ಥಳಕ್ಕೆ ಪುರಸಭಾ ಸದಸ್ಯೆ ಜಯಶ್ರೀ ಮತ್ತು ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

Leave a Reply

Your email address will not be published. Required fields are marked *