Breaking News

ಮೂಡುಬೆಳ್ಳೆ ಕಲ್ಮಂಜೆಯಲ್ಲಿ ಉರುಳಿಗೆ ಸಿಕ್ಕು ಒದ್ದಾಡಿದ ಚಿರತೆ, ಬೆಳಗ್ಗೆ ಬಿದ್ದುದನ್ನು ಸಂಜೆ ಪಾರು ಮಾಡಿದ ಅರಣ್ಯ ಇಲಾಖೆ


ಬೇಟೆ ಹುಡುಕಿ ಬಂದ ಚಿರತೆಯೊಂದು ಹಂದಿಗೆ ಇಟ್ಟ ಉರುಳಿಗೆ ಸಿಕ್ಕಿಕೊಂಡು ಒದ್ದಾಡಿದ ಘಟನೆ ಉಡುಪಿ ತಾಲೂಕಿನ ಮೂಡುಬೆಳ್ಳೆ ಕಲ್ಮಂಜೆಯಲ್ಲಿ ನಡೆದಿದೆ.
ಬೆಳಗ್ಗೆ ಹೊತ್ತು ಉರುಳಿಗೆ ಚಿರತೆ ಬಿದ್ದಾಗ ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಆದ್ರೆ ಸಂಜೆಯ ಹೊತ್ತಿಗೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಉರುಳಿಗೆ ಬಿದ್ದ ಚಿರತೆಯನ್ನು ರಕ್ಷಿಸಿದ್ದಾರೆ. ಅರಿವಳಿಕೆಯನ್ನು ನೀಡಿ ಉರುಳನ್ನು ತೆಗೆಯುವ ಮೂಲಕ ಚಿರತೆಯನ್ನು ಪಾರು ಮಾಡಿದ್ದಾರೆ. ಸೆರೆ ಹಿಡಿದ ಚಿರತೆಯನ್ನು ಅರಣ್ಯಕ್ಕೆ ಬಿಡಲಾಗಿದೆ. ಹಲವು ದಿನಗಳಿಂದ ಈ ಚಿರತೆ ಗ್ರಾಮದಲ್ಲಿ ಕಾಣಿಸಿಕೊಂಡಿದ್ದು ಕೋಳಿ, ನಾಯಿಯನ್ನು ಬೇಟೆಯಾಡಿದೆ.
ಈ ಹಿಂದೆ ಕೂಡ ಮೂಡುಬೆಳ್ಳೆ ಪರಿಸರದಲ್ಲಿ ಚಿರತೆ ಓಡಾಟ ನಡೆಸಿತ್ತು. ಆದ್ರೆ ಈ ಬಗ್ಗೆ ಅರಣ್ಯ ಇಲಾಖೆ ಬೇಜವಾಬುದಾರಿಯಿಂದ ವರ್ತಿಸಿದೆ. ಇದೀಗ ಚಿರತೆ ಸೆರೆಯಾಗಿದ್ದರಿಂದ ಗ್ರಾಮಸ್ಥರ ಆತಂಕ ದೂರವಾಗಿದೆ. ಮುಂದೆಯಾದರೂ ಅರಣ್ಯ ಇಲಾಖೆ ಇಂತಹ ಸಂದರ್ಭದಲ್ಲಿ ಸೂಕ್ತವಾಗಿ ಸ್ಪಂದಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಚಿರತೆಯನ್ನು ನೋಡಲು ನೂರಾರು ಜನ ಜಮಾಯಿಸಿದ್ದರು.

Related posts

Leave a Reply