Header Ads
Header Ads
Breaking News

ಮೂಡುಶೆಡ್ಡೆ ಶುಭೋದಯ ವಿದ್ಯಾಲಯ-ಕಲಾ ಮತ್ತು ಸಾಹಿತ್ಯ ಸಂಘ ಸಹಭಾಗಿತ್ವದಲ್ಲಿ ಸಾಹಿತ್ಯ ಹಬ್ಬ

ಮಂಗಳೂರಿನ ಮೂಡುಶೆಡ್ಡೆ ಶುಭೋದಯ ವಿದ್ಯಾಲಯ ಹಾಗೂ ಕಲಾ ಮತ್ತು ಸಾಹಿತ್ಯ ಸಂಘ ಸಹಭಾಗಿತ್ವದಲ್ಲಿ ಸಾಹಿತ್ಯ ಹಬ್ಬವನ್ನು ಆಯೋಜಿಸಲಾಗಿತ್ತು. ನಗರದ ವಿವಿಧ ಶಾಲಾ ವಿಧ್ಯಾರ್ಥಿಗಳು ಸಾಹಿತ್ಯ ಹಬ್ಬದಲ್ಲಿ ಪಾಲ್ಗೊಂಡಿದ್ರು.

 ನಗರದ ಮೂಡುಶೆಡ್ಡೆ ಶುಭೋದಯ ವಿದ್ಯಾಲಯ ಹಾಗೂ ಕಲಾ ಮತ್ತು ಸಾಹಿತ್ಯ ಸಂಘದ ಸಹಭಾಗಿತ್ವದಲ್ಲಿ ನಡೆದ ಸಾಹಿತ್ಯ ಹಬ್ಬವನ್ನು ಶಾಲಾ ಪ್ರಾಂಶುಪಾಲರಾದ ಜಯಶ್ರೀ ಶೆಣೈ ಅವರು ಉದ್ಘಾಟಿಸಿದ್ರ. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಮತ್ತು ಸಂಗೀತದ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮೊಟ್ಟ ಮೊದಲ ಬಾರಿಗೆ ಶಾಲಾ ಮಟ್ಟದಲ್ಲಿಯೇ ಈ ಸ್ಪರ್ಧೆಯನ್ನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ರು.

ಈ ವೇಳೆ ಕಾರ್ಯಕ್ರಮ ಸಂಚಾಲಕರಾದ ಧನಂಜಯ್, ಕಲಾ ಮತ್ತು ಸಾಹಿತ್ಯ ಸಂಘದ ಅಧ್ಯಕ್ಷೆ ಸಾಧನಾ ಭಟ್ ಸೇರಿದಂತೆ ಮತ್ತಿತರರು ಉಪಸ್ಥಿತಿರಿದ್ದರು.

Related posts

Leave a Reply