
ಉಡುಪಿ ಜಿಲ್ಲೆಯ ಹಾಲಾಡಿಯಲ್ಲಿ ನಡೆದ ಕಾರು ಅಪಘಾತದಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟದ ನಿರ್ದೇಶಕ ಹದ್ದೂರು ರಾಜೀವ ಶೆಟ್ಟಿಯವರು ವಿಧಿವಶರಾಗಿದ್ದು, ಅವರಿಗೆ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕದ ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗ್ಡೆ ಮತ್ತು ಒಕ್ಕೂಟದ ಎಲ್ಲಾ ನಿರ್ದೇಶಕರು ಸಂತಾಪ ಸೂಚಿಸಿದ್ದಾರೆ.
ಹದ್ದೂರು ರಾಜೀವ ಶೆಟ್ಟಿಯವರು ದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ಮಂಡಳಿಗೆ ಸತತ ಮೂರು ಅವಧಿಗೆ ನಿರ್ದೇಶಕರಾಗಿ ಆಯ್ಕೆಗೊಂಡು ಸೇವೆ ಸಲ್ಲಿಸಿ, ವಿವಿಧ ಸಮಾಜ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಹಾಗೂ ವಿವಿಧ ಸಹಕಾರಿ ಸಂಘಗಳಲ್ಲಿ ಅಧ್ಯಕ್ಷರಾಗಿದ್ದ, ಶಂಕರನಾರಾಯಣ ಮಂಡಲ ಪಂಚಾಯತ್ ಅಧ್ಯಕ್ಷರಾಗಿ, ಮಾಜಿ ಸದಸ್ಯರಾಗಿ, ಕುಂದಾಪುರ ತಾಲೂಕು ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ ಪ್ರಗತಿ ಪರ ರೈತರು ಹಾಗೂ ಹೈನುಗಾರರಾದ ಹದ್ದೂರು ರಾಜೀವ ಶೆಟ್ಟಿಯವರು ಆಕಸ್ಮಿಕ ಅಪಘಾತದಿಂದ ನಿಧನ ಹೊಂದಿದ್ದು ದುಃಖಕರ ವಿಷಯ. ಇವರಿಗೆ ದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗ್ಡೆ, ಉಪಾಧ್ಯಕ್ಷರಾದ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಒಕ್ಕೂಟದ ನಿರ್ದೇಶಕರು ಮತ್ತು ಕ.ಹಾ.ಮ. ದ ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ ಮತ್ತು ಒಕ್ಕೂಟದಎಲ್ಲಾ ನಿರ್ದೇಶಕ ಮಿತ್ರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಸದರಿಯವರ ಆತ್ಮಕ್ಕೆಚಿರಶಾಂತಿಯನ್ನು ಭಗವಂತನು ನೀಡಲಿ ಎಂದು ಕೋರಿರುತ್ತಾರೆ.