Header Ads
Header Ads
Breaking News

ಮೂರು ಉಕ್ಕು ಕಂಪೆನಿಗಳ ಭಾರೀ ಸಾಲ, ದಿವಾಳಿ ಸಂಹಿತೆಯಡಿ ವಸೂಲಿಗೆ ಶಿಫಾರಸು

ಭಾರೀ ಮೊತ್ತದ ಸಾಲ ಬಾಕಿ ಉಳಿಸಿಕೊಂಡಿರುವ ಮೂರು ಉಕ್ಕು ಉದ್ದಿಮೆಗಳ ವಿರುದ್ಧ ಕ್ರಮ ಕೈಗೊಳ್ಳಲು ಬ್ಯಾಂಕ್ಗಳು ಮುಂದಾಗಿವೆ.
ಭೂಷಣ್ ಸ್ಟೀಲ್, ಎಸ್ಸಾರ ಸ್ಟೀಲ್ ಮತ್ತು ಇಲೆಕ್ಟ್ರೊಸ್ಟೀಲ್ ಸ್ಟೀಲ್ಸ್ ಲಿಮಿಟೆಡ್ಗಳ ಸಾಲ ಬಾಕಿ ವಸೂಲಿ ಮಾಡಲು, ಹಣಕಾಸು ಪರಿಸ್ಥಿತಿ ಮತ್ತು ದಿವಾಳಿ ಸಂಹಿತೆಯಡಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಗೆ ಶಿಫಾರಸು ಮಾಡಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಗುರುತಿಸಿರುವ ಹನ್ನೆರಡು ಅತಿ ದೊಡ್ಡ ಸುಸ್ತಿದಾರ ಉದ್ದಿಮೆಗಳ?ಪಟ್ಟಿಯಲ್ಲಿ ಈ ಮೂರೂ ಉಕ್ಕು ಸಂಸ್ಥೆಗಳು ಇವೆ.
ಈ ಹನ್ನೆರಡು ಉದ್ದಿಮೆಗಳ ಸಾಲ ಬಾಕಿ ಮೊತ್ತವು, ಬ್ಯಾಂಕ್ಗಳ ಒಟ್ಟಾರೆ ರೂ.?೮ ಲಕ್ಷ ಕೋಟಿಗಳಷ್ಟು ವಸೂಲಾಗದ ಸಾಲದ ಮೊತ್ತದಲ್ಲಿ ಕಾಲು ಭಾಗದಷ್ಟಿದೆ. ಬ್ಯಾಂಕ್ಗಳ ವಸೂಲಿಯಾಗದ ಸಾಲದ?ಪ್ರಮಾಣ ತಗ್ಗಿಸಲು ರಚಿಸಿದ್ದ ಇಬ್ಬರ ಸದಸ್ಯರ ಮೇಲ್ವಿಚಾರಣಾ ಸಮಿತಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಈಗ ಮತ್ತೆ ಹೊಸದಾಗಿ ಮೂವರು ಸದಸ್ಯರನ್ನು ನೇಮಿಸಿದೆ.

Related posts

Leave a Reply