Header Ads
Header Ads
Breaking News

ಮೂರು ದಿನಗಳ ಕಾಲ ನಡೆಯುವ ಬ್ಯಾರಿ ಮೇಳಕ್ಕೆ ಗೃಹ ಸಚಿವ ಎಂ.ಬಿ. ಪಾಟೀಲ್‌ರಿಂದ ಚಾಲನೆ

ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟಿ ವತಿಯಿಂದ ಬ್ಯಾರಿ ಮೇಳ ಮೂರು ದಿನಗಳ ಕಾಲ ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆಯಲಿದ್ದು, ಉದ್ಘಾಟನಾ ಕಾರ್ಯಕ್ರಮ ನಡೆಯಿತು. ರಾಜ್ಯದ ಗೃಹಸಚಿವ ಎಂ.ಬಿ. ಪಾಟೀಲ್ ಅವರು ಬ್ಯಾರಿ ಮೇಳಕ್ಕೆ ಚಾಲನೆ ನೀಡಿದರು.ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆದ ಬ್ಯಾರಿ ಮೇಳಕ್ಕೆ ಗೃಹ ಸಚಿವ ಎಂ.ಬಿ. ಪಾಟೀಲ್ ಅವರು ಚಾಲನೆ ನೀಡಿದರು ಬಳಿಕ ಮಾತನಾಡಿದ ಅವರು, ಮುಡಿಪುವಿಗೆ ಅಗತ್ಯವಿರುವ ಅಗ್ನಿಶಾಮಕ ಠಾಣೆ ಒದಗಿಸಲು ಎಲ್ಲಾ ರೀತಿಯಲ್ಲಿ ಕ್ರಮವಹಿಸಲಾಗುವುದು.
ಮುಸ್ಲಿಮರು ದೇಶದಲ್ಲಿ ಮಾತ್ರವಲ್ಲ , ಆರಬ್ ನಲ್ಲೂ ತಮ್ಮ ವ್ಯಾಪಾರ ವಹಿವಾಟು ವಿಸ್ತರಿಸಿದ್ದಾರೆ. ಶಿಕ್ಷಣದ ಮೂಲಕ ಆರ್ಥಿಕವಾಗಿ ಸದೃಢವಾಗಿದ್ದಾರೆ. ಶಿಕ್ಷಣ ಮತ್ತು ಕಾಯಕ ಮನುಷ್ಯನ ಉಸಿರಾಗಬೇಕು. ಒಗ್ಗಟ್ಟಾಗಿ ಬಾಳುವ ಮೂಲಕ ಮಂಗಳೂರಿನ ಸೌಹಾರ್ದ ಪರಂಪರೆ ಮುಂದುವರಿಸೋಣ ಅಂತಾ ಹೇಳಿದರು.ಇನ್ನು ಈ ಬಾರಿಯ ಬಜೆಟ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚಿನ ಕೊಡುಗೆ ನೀಡಲಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಾತನಾಡಿ, ಬಡತನದಲ್ಲಿ ಹುಟ್ಟಿದರೂ ಸಾಧನೆಯ ಮೂಲಕ ಆರ್ಥಿಕವಾಗಿ ಸದೃಢ ರಾಗಬಹುದು ಎಂಬುದಕ್ಕೆ ಮುಸ್ಲಿಮರ ಶ್ರಮಸಾಕ್ಷಿ. ಶೈಕ್ಷಣಿಕ ಕ್ರಾಂತಿಯ ಮೂಲಕ ಸಮಾಜದ ಬಡತನ ನಿವಾರಣೆ ಸಾಧ್ಯ ಎಂದು ತಿಳಿಸಿದರು.ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಿ.ಅಹಮ್ಮದ್ ಹಾಜಿ ಮೊಹಿಯುದ್ದೀನ್, ಡಾ.ಎಂ.ಅಬ್ದುಲ್ ರೆಹಮನ್, ಶೇಖ್ ಕರ್ನಿರೆ, ಎ.ಕೆ.ಅಹಮ್ಮದ್ ಮೊದಲಾದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯ್ತು.ಈ ವೇಳೆ ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಸ್.ಎಂ ರಶೀದ್ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಮಾಜಿ ಸಚಿವ ರಮಾನಾಥ್ ರೈ, ಮೇಯರ್ ಭಾಸ್ಕರ್ ಮೊಯ್ಲಿ, ಮಾಜಿ ಶಾಸಕ ಬಿ.ಎ.ಮೊಯಿದ್ದೀನ್ ಬಾವಾ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply