Header Ads
Header Ads
Header Ads
Breaking News

ಮೂಲಭೂತವಾದಿಗಳ ಹಿಂದೂ ದಮನ ನೀತಿಗೆ ಖಂಡನೆ ಉಡುಪಿಯಲ್ಲಿ ಹಿಂಜಾವೆ, ವಿಶ್ವ ಹಿಂದು ಪರಿಷತ್‌ನಿಂದ ಪ್ರತಿಭಟನೆ

ಮೂಲಭೂತವಾದಿಗಳ ಹಿಂದೂ ದಮನ ನೀತಿಯನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ಮತ್ತು ವಿಶ್ವ ಹಿಂದು ಪರಿಷತ್ ಬಜರಂಗದಳ ವತಿಯಿಂದ ಉಡುಪಿಯಲ್ಲಿ ಪ್ರತಿಭಟನೆ ನಡೆಯಿತು.
ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಬಳಿ ನಡೆದ ಪ್ರತಿಭಟನೆಯಲ್ಲಿ ಹಿಂದೂ ಸಾಮಾಜಿಕ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಸರ್ಕಾರಿ ಪ್ರಯೋಜಿತ ದಬ್ಬಾಳಿಕೆಯನ್ನು ಖಂಡಿಸಲಾಯಿತು.

ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಭಜರಂಗ ದಳದ ಮಂಗಳೂರು ವಿಭಾಗ ಸಂಚಾಲಕರ ಸುನಿಲ್ ಕೆ.ಆರ್ ಮಾತನಾಡಿ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಹಿಂದೂ ಸಂಘಟನೆಗಳ ನಾಯಕರ ಮೇಲೆ ದೌರ್ಜನ್ಯ ನಡೆಸುತ್ತಿದೆ. ಹಿಂದೂ ಸಾಮಾಜಿಕ ಧಾರ್ಮಿಕ ಚಟುವಟಿಗೆಳನ್ನು ಹತ್ತಿಕ್ಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಮುಸ್ಲಿಂ ಮೂಲಬೂತ ವಾದಿಗಳಿಗೆ ಸರ್ಕಾರ ಬೆಂಬಲವನ್ನು ನೀಡುತ್ತಿದೆ.

ಹಿಂದು ಸಂಘಟನೆಯ ನಾಯಕರಾದ ಪ್ರಭಾಕರ್ ಭಟ್ ಜಗದೀಶ್ ಕಾರಂತ ಮುಂತಾದವರ ಮೇಲೆ ವಿನಾ ಕಾರಣ ಸುಳ್ಳು ಪ್ರಕರಣವನ್ನು ದಾಖಲಿಸಿ ಕಿರುಕುಳವನ್ನು ನೀಡುತ್ತಿದೆ. ಸರ್ಕಾರದ ಈ ಧೋರಣೆಯ ವಿರುದ್ಧ ಸಂಘಟನೆಯ ಕಾರ್ಯಕರ್ತರು ಸಂಘಟಿತ ಹೋರಾಟ ಮಾಡಬೇಕು ಎಂದರು.

ವರದಿ:ಪಲ್ಲವಿ ಸಂತೋಷ್

Related posts

Leave a Reply