Header Ads
Header Ads
Breaking News

ಮೂಲಭೂತ ಸೌಕರ್ಯ ವಂಚಿತ ಅನಾರು ಶಾಲೆ:ಮಾಜಿ ಶಾಸಕ ವಸಂತ ಬಂಗೇರ ಶಾಲೆಗೆ ಭೇಟಿ

ಮೂಲಭೂತ ಸೌಕರ್ಯ ವಂಚಿತ ಪಟ್ರಮೆಯ ಅನಾರು ಶಾಲೆಗೆ ಮಾಜಿ ಶಾಸಕರ ವಸಂತ ಬಂಗೇರ ಅವರು ಭೇಟಿ ನೀಡಿ, ಸಮಸ್ಯೆಗಳನ್ನು ಆಲಿಸಿದರು.

1954 ರಲ್ಲಿ ಪ್ರಾರಂಭಗೊಂಡ ಗ್ರಾಮದ ಪ್ರಮುಖ ಸರಕಾರಿ ಶಾಲೆಯಾದ ಸ.ಉ.ಹಿ.ಪ್ರಾ.ಶಾಲೆ ಅನಾರು, ಇಂದು ಹಳೆಯ ಕಾಲದ ಕೊಠಡಿಗಳನ್ನು ಕಳೆದುಕೊಂಡು, ಸರಕಾರದಿಂದ ಹೊಸಕೊಠಡಿಗಳೂ ಮಂಜೂರಾಗದೆ ಸಂಕಷ್ಟ ಪರಿಸ್ಥಿತಿಯಲ್ಲಿರುವ ಬಗ್ಗೆ ಗ್ರಾಮಸ್ಥರು ಮಾಜಿ ಶಾಸಕರಾದ ಶ್ರೀ ವಸಂತ ಬಂಗೇರರಲ್ಲಿ ಸರಕಾರದಿಂದ ಯಾವುದೇ ನೆರವು ಒದಗಿಸಲು ಒತ್ತಡ ಹಾಕಬೇಕೆಂದು ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ನಿನ್ನೆ ಅನಾರು ಶಾಲೆಗೆ ಭೇಟಿ ನೀಡಿದ ವಸಂತ ಬಂಗೇರರು ಶಾಲೆಯು ಎದುರಿಸುತ್ತಿರುವ ಸಮಸ್ಯೆಗಳನ್ನು ಕಣ್ಣಾರೆ ಕಂಡರು. ಒಟ್ಟು ೫ ತರಗತಿ ಕೊಠಡಿಗಳು ನಾಶವಾಗಿದ್ದು, ಸರಕಾರದಿಂದ ಹೊಸದಾಗಿ 5 ಕೊಠಡಿಗಳು ಮಂಜೂರಾಗಬೇಕಿತ್ತಾದರೂ ಮಕ್ಕಳ ಸಂಖ್ಯೆ ಕಡಿಮೆ ಇರುವುದು ಮಂಜೂರಾತಿಗೆ ಅಡ್ಡಿಯಾಗಲಿದೆ ಎಂದು ಅಭಿಪ್ರಾಯಿಸಿದರು. ನನ್ನ ಶಾಸಕತ್ವದ ಕೊನೆಯ ಹಂತದಲ್ಲಿ ನಾನು ೪ ಕೊಠಡಿಗಳಿಗೆ ಪ್ರಯತ್ನಿಸಿದ್ದರೂ ಒಂದು ಮಾತ್ರ ಅಂಗೀಕಾರವಾಗಿತ್ತು. ಆ ಒಂದು ಕೊಠಡಿ ಮಾತ್ರ ಈಗ ಮಂಜೂರಾಗಿದೆ ಎಂದರು.

ಈ ಸಂದರ್ಭದಲ್ಲಿ ನ್ಯಾಯವಾದಿ ಬಿಯಂಭಟ್, ಡೀಗಯ ಮಾಷ್ಟ್ರು, ಅಜಿತ್ ಕುಮಾರ್, ಸುಂದರ ಹೆಗ್ಡೆ, ಪಂಚಾಯತ್ ಪಿಡಿಓ ಅಂಬರೀಷ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply