Header Ads
Header Ads
Breaking News

ಮೂಲಭೂತ ಸೌಕರ್ಯ ವಂಚಿತ ತಲಪಾಡಿ ಬಸ್‌ನಿಲ್ದಾಣ: ಪ್ರಯಾಣಿಕರ ಪರದಾಟ

ಮಂಜೇಶ್ವರ : ಕೇರಳ ಕರ್ನಾಟಕ ಗಡಿ ಪ್ರದೇಶವಾದ ಕೇರಳದ ವ್ಯಾಪ್ತಿಯಲ್ಲಿರುವ ತಲಪಾಡಿಯಲ್ಲಿ ಪ್ರಯಾಣಿಕರಿಗೆ ಬಸ್ಸು ತಂಗುದಾಣ ಸೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ.ಸುಮಾರು 30 ವರ್ಷಕ್ಕೆ ಮುಂಚಿತವಾಗಿ ರಾ.ಹೆದ್ದಾರಿಯ ಒಳ ಭಾಗದಲ್ಲಿ ಒಂದು ಬಸ್ಸು ತಂಗುದಾಣ ನಿರ್ಮಾಣ ವಾಗಿದ್ದರೂ ಅದು ಇದೀಗ ಜೂಜು ದಂದೆಕೋರರ ಅಡ್ಡೆಯಾಗಿ ಪ್ರಯಾಣಿಕರಿಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿರುವುದಾಗಿ ಸ್ಥಳೀಯರು ಆರೋಪಿಸುತಿದ್ದಾರೆ.ದಿನನಿತ್ಯ ಸಾವಿರಾರು ಪ್ರಯಾಣಿಕರು ಈ ಬಸ್ಸು ನಿಲ್ದಾಣದಿಂದ ಬೇರೆ ಬೇರೆ ಕಡೆ ಪ್ರಯಾಣಿಸುತಿದ್ದಾರೆ.

ಅದರೆ ಇಲ್ಲಿಗೆ ಆಗಮಿಸುತ್ತಿರುವ ಪ್ರಯಾಣಿಕರು ಅಗತ್ಯ ಸೌಲಭ್ಯಗಳಿಲ್ಲದೆ ಪರದಾಡಬೇಕಾದ ಪರಿಸ್ಥಿತಿ ಬಂದೊದಗಿದೆ.ಪ್ರಯಾಣಿಕರ ಪರದಾಟವನ್ನು ನೋಡಿ ಇಲ್ಲಿಯ ಆಟೋ ಚಾಲಕರು ತಾತ್ಕಾಲಿಕವಾದ ಶೆಡ್ ನಿರ್ಮಿ ಸಿ ಕೊಟ್ಟಿದ್ದಾರೆ. ಒಂದು ಮಳೆ ಬಂದರೆ ಪ್ರಯಾಣಿಕರು ಬಸ್ಸಿಗಾಗಿ ಕಾದು ನಿಲ್ಲುವ ಸ್ಥಳದಲ್ಲಿ ಮಳೆ ನೀರು ನಿಂತು ಗುಬ್ಬೆದ್ದು ನಾರುತ್ತಿದೆ.ಶೌಚಾಲಯಗಳು ಇಲ್ಲದೇ ಇರುವುದು ಪ್ರತ್ಯೇಕವಾಗಿಯೂ ಮಹಿಳಾ ಪ್ರಯಾಣಿಕರನ್ನು ಇನ್ನಷ್ಟು ಸಂಕಷ್ಟದಲ್ಲಿ ಸಿಲುಕಿಸಿದೆ.ರಾತ್ರಿ ಹಗಲು ಎನ್ನದೇ ದಿನ ನಿತ್ಯ ಪ್ರಯಾಣಿಕರಿರುವ ಈ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ ಒಂದು ಬಸ್ಸು ತಂಗುದಾಣ ಅನಿವಾರ್ಯಯವಾಗಿದೆ. ಊರವರು ಅದೆಷ್ಟೋ ಸಲ ಜನಪ್ರತಿನಿಧಿಗಳಲ್ಲಿ ವಿನಂತಿಸಿ ಕೊಂಡರೂ ಯಾವುದೇ ಪ್ರಯೋಜನ ಲಭಿಸಿಲ್ಲವೆಂದು ಹೇಳುತಿದ್ದಾರೆ. ಮೂತ್ರ ವಿಸರ್ಜನೆಗೆ ನಾಗರಿಕರು ಬಸ್ ನಿಲ್ದಾಣ ಪರಿಸರವನ್ನೇ ಆಯ್ಕೆ ಮಾಡುತಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆ ಕೂಡಾ ಇಲ್ಲಿ ಇಲ್ಲವಾಗಿದೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಬೇಕಾಗಿದೆ

Related posts

Leave a Reply