Breaking News

ಮೂಲ್ಕಿಗೆ ಅಗ್ನಿಶಾಮಕ ಘಟಕ, ಜಾಗ ಸಿಕ್ಕ ಕೂಡಲೆ ಆರಂಭ

ಮೂಲ್ಕಿಯಲ್ಲಿ ಅಗ್ನಿ ಶಾಮಕ ಘಟಕವನ್ನು ತೆರೆಯಬೇಕೆಂಬ ಹಲವು ವರ್ಷದ ಬೇಡಿಕೆಗೆ ಸರಕಾರ ಕೊನೆಗೂ ಮಣಿದಿದೆ. ಘಟಕ ಸ್ಥಾಪನೆಗೆ ಸರಕಾರ ಹಸಿರು ನಿಶಾನೆ ತೋರಿದೆ.
ಜಮೀನಿನ ಲಭ್ಯತೆಯನ್ನು ಆಧರಿಸಿ ಒಂದೆರಡು ತಿಂಗಳಲ್ಲಿ ಘಟಕವು ಕಾರ್ಯಾಚರಣೆ ನಡೆಸಲಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಧ್ಯ ಭಾಗದಲ್ಲಿನ ಮೂಲ್ಕಿಗೆ ಸುಸಜ್ಜಿತ ಅಗ್ನಿಶಾಮಕ ದಳದ ಘಟಕದ ಬೇಡಿಕೆಯನ್ನು ನಾಗರಿಕ ಸಮಿತಿಯ ನೇತೃತ್ವದಲ್ಲಿ ಹಲವು ಬಾರಿ ಮನವಿ ಮಾಡಲಾಗಿತ್ತು.
ಮೂಲ್ಕಿಯ ಸುತ್ತಮುತ್ತ ಪ್ರದೇಶಕ್ಕೆ ಘಟಕ ಅತೀ ಅಗತ್ಯವಾಗಿದ್ದು, ಕೈಗಾರಿಕಾ ಪ್ರಾಂಗಣ, ಮುಕ್ಕ ಕೈಗಾರಿಕಾ ಘಟಕಗಳು, ಸಮುದ್ರದ ಹಿನ್ನೆಲೆ, ತಗ್ಗು ಪ್ರದೇಶಗಳಾದ ಮಟ್ಟು, ಮಾನಂಪಾಡಿ, ಕರ್ನಿರೆ, ಪಂಜ ಕೊಕುಡೆ, ಉಲ್ಯ, ಸಸಿಹಿತ್ಲು ಬಜಪೆಯಂತಹ ಪ್ರದೇಶಗಳಿಗೂ ನೆರೆ ಹಾವಳಿ ಮತ್ತು ಇನ್ನಿತರ ದುರ್ಘಟನೆ ಸಂಭವಿಸಿದಾಗ ಕಾರ್ಯಾಚರಣೆಗೆ ಅನುಕೂಲ.

Related posts

Leave a Reply