Header Ads
Breaking News

ಮೂಲ್ಕಿ ಬಿರುಸಿನಿಂದ ನಡೆಯುತ್ತಿದೆ ನಗರಪಂಚಾಯತ್ ಚುನಾವಣೆ

ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳ ಚುನಾವಣೆ ಇಂದು ನಡೆಯುತ್ತಿದ್ದು, ದ.ಕ. ಜಿಲ್ಲೆಯ ಮೂರು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದೆ. ಮೂಲ್ಕಿ ನಗರ ಪಂಚಾಯತ್ ಚುನಾವಣೆಇಂದು ನಡೇಯುತ್ತಿದೆ ಒಟ್ಟು 18 ವಾರ್ಡ್ ಗಳಿರುವ ಈ ನಗರ ಪಂಚಾಯತ್ ನಲ್ಲಿ ಒಟ್ಟು 43 ಅಭ್ಯರ್ಥಿಗಳು ಕಣದಲ್ಲಿದ್ದು ಕಾಂಗ್ರೇಸ್ ಜೆಡಿಎಸ್ ಮೈತ್ರಿ ಇಲ್ಲೂ ಮುಂದುವರಿದಿದೆ. ಕಳೆದ ಬಾರಿ ಇಲ್ಲಿ ಬಿಜೆಪಿ ಅಧಿಕಾರ ಪಡೆದಿದ್ದು ಈ ಬಾರಿಯೂ ಅಧಿಕಾರ ಹೊಂದುವ ಉತ್ಸಾಹದಲ್ಲಿದೆ, ಕಾಂಗ್ರೇಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳೂ ಸಾಕಷ್ಟು ಸ್ಪರ್ದೆಯನ್ನು ನೀಡುತ್ತಿದ್ದಾರೆ, ಕಳೆದ ಬಾರಿವಿಧಾನ ಸಭಾ ಕ್ಷೇತ್ರ ಕಾಂಗ್ರೇಸ್ ಶಾಸಕರಿದ್ದು ಈ ಬಾರಿ ಬಿಜೆಪಿ ಶಾಸಕರಿದ್ದ ಕಾರಣ ಬಿಜೆಪಿ ವಲಯದಲ್ಲಿ ಗೆಲುವು ಸಾಧಿಸುವ ಸಾಕಷ್ಟು ನಿರೀಕ್ಷ ಇದೆ. ಸಂಸದ ನಳಿನ್ , ಶಾಸಕ ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ಪ್ರಚಾರ ಕಾರ್ಯವನ್ನು ನಡೆಸಿದ್ದಾರೆ. ಈ ಬಾರಿ ಕಾಂಗ್ರೇಸ್ ಅಧಿಕಾರ ಬರುವುದು ಶತಸಿದ್ದ ಎಂದು ಕಾಂಗ್ರೇಸ್ ಕಾರ್ಯಕರ್ತರು ಹೇಳುತ್ತಿದ್ದಾರೆ, ತಮ್ಮ ಅವಧಿಯಲ್ಲಿ ಆದ ಅಭಿವೃದ್ದಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತಯಾಚಿಸಿತ್ತಿದ್ದಾರೆ, ಮಾಜಿಶಾಸಕ ಅಭಯಚಂದ್ರ ಜೈನ್, ಐವನ್ ಡಿಸೋಜ ಮತ್ತಿತರ ಮುಖಂಡರು ಪ್ರಚಾರ ಕಾರ್ಯವನ್ನು ನಡೆಸಿದ್ದು, ಮೇ 31 ರಂದು ಮತ ಎಣಿಕೆ ನಡೆಯಲಿದೆ.

Related posts

Leave a Reply

Your email address will not be published. Required fields are marked *