
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆರೂ ದಶಾವತಾರ ಯಕ್ಷಗಾನ ಮೇಳದ ತಿರುಗಾಟಕ್ಕೆ ದೇವಳದ ಅಂಗಣದಲ್ಲಿ ಆರೂ ಮೇಳದ ಕಲಾವಿದರಿಗೆ ಕಟೀಲು ಶ್ರೀದೇವಿಯ ಗರ್ಭಗುಡಿಯ ಮುಂದೆ ಗೆಜ್ಜೆಗಳನ್ನು ನೀಡುವ ಮೂಲ್ಕಿ ವರ್ಷದ ಯಕ್ಷಗಾನಕ್ಕೆ ಚಾಲನೆ ನೀಡಲಾಯಿತು. ಕಲಾವಿದರು ಗೆಜ್ಜೆಕಟ್ಟುವ ಸಂಪ್ರದಾಯ ನಡೆಸಿದರು, ದೇವಳದ ಪ್ರಮುಖರು, ಅರ್ಚಕರು, ಗ್ರಾಮಸ್ಥರ ಹಾಗೂ ಯಕ್ಷಾಭಿಮಾನಗಳ ಸಮ್ಮುಖದಲ್ಲಿ ಪ್ರಥಮ ಸೇವೆಯಾಟವು ದೇವಳದ ರಥಬೀದಿಯಲ್ಲಿ ನಡೆಯಿತು. ದೇವಳದ ಪ್ರಧಾನ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಕಲಾವಿದರಿಗೆ ಗೆಜ್ಜೆ ಹಸ್ತಾಂತರಿಸಿದರು, ಈ ಸಂದರ್ಭ ಮುಕ್ತೇಸರ ವಾಸುದೇವ ಆಸ್ರಣ್ಣ, ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಲಕ್ಷೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ,ಕಮಲಾದೇವಿಪ್ರಸಾದ ಆಸ್ರಣ್ಣ, ಹರಿನಾರಾಣದಾಸ ಆಸ್ರಣ್ಣ, ವೇದವ್ಯಾಸ ತಂತ್ರಿ, ಮೇಳದ ಸಂಚಾಲಕ ದೇವಿಪ್ರಸಾದ್ ಶೆಟ್ಟಿ ಮತ್ತಿತರರು ಇದ್ದರು.ಹಲವಾರು ಗಣ್ಯರು ಭೇಟಿ ನೀಡಿ ಮೇಳದ ತಿರುಗಾಟಕ್ಕೆ ಶುಭ ಹಾರೈಸಿದರು.