
ಮೂಲ್ಕಿ ಹೆಜಮಾಡಿ ನವಯುಗ ಕಂಪೆನಿಯ ಟೋಲ್ಗೇಟ್ನಲ್ಲಿ ಮೂಲ್ಕಿ ವಾಹನಗಳಿಗೆ ವಿನಾಯಿತಿ ನೀಡದೆ ಅವಿಶ್ವಾಸವನ್ನು ತೋರಿಸುವ ಪ್ರಕ್ರಿಯೆಯನ್ನು ಖಂಡಿಸಿ ಧರಣಿ ಮತ್ತು ಪಾದಯಾತ್ರೆ ಮೂಲ್ಕಿ ಅಭಿವೃದ್ಧಿ ನಾಗರಿಕ ಸಮಿತಿ ವತಿಯಿಂದ ಹಮ್ಮಿಕೊಂಡರು. ಅನೇಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಆಕ್ರೋಶವನ್ನು ವ್ಯಕ್ತಪಡಿಸಿದರು. ಪ್ರತಿಭಟನೆಯನ್ನು ಪಾಲ್ಗೊಂಡ ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅವರು, ಜಾತಿ ಧರ್ಮ, ರಾಜಕೀಯವನ್ನು ಬದಿಗಿಟ್ಟು ಒಗ್ಗಟಿನಿಂದ ಹೋರಾಟ ನಡೆಸಿದರೆ ಯಾವುದೇ ಕಾರ್ಯದಲ್ಲಿ ಯಶಸ್ಸು ಸಾಧ್ಯ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ವಿನಯ ಕುಮಾರ್ ಸೋರಕೆ, ಅಭಯಚಂದ್ರ ಜೈನ್, ದೇವಿಪ್ರಸಾದ್ ಶೆಟ್ಟಿ ಭೆಳಪು, ಹರಿಕೃಷ್ಣ ಪುನರೂರು, ಮಿಥುನ್ ರೈ, ನಾಗರಿಕ ಸಮಿತಿ ಅಧ್ಯಕ್ಷ ಹರಿಶ್ ಪುತ್ರನ್ ನಗರ ಪಂಚಾಯತ್ ಅಧ್ಯಕ್ಷ ಸುನೀಲ್ ಅಳ್ವ, ಧನಂಜಯ ಕೋಟ್ಯಾನ್ ಮಟ್ಟು, ಶಾಲೆತ್ ಪಿಂಟೋ, ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಮೂಲ್ಕಿಯಿಂದ ಹೆಜಮಾಡಿ ಟೋಲ್ ವರೆಗೆ ಪ್ರತಿಭಟನಾ ಜಾಥ ನಡೆಯಿತು ನಂತರ ಟೋಲ್ ಬಳಿ ಬಹಿರಂಗ ಸಭೆ ನಡೆಯಿತು.