Header Ads
Header Ads
Breaking News

ಮೂಲ್ಕಿ ವಿಜಯಾ ಕಾಲೇಜಿನ ಅರ್ಪಣ ವೇದಿಕೆಯಲ್ಲಿ ಪ್ರತಿಭಾ ಸೌರಭ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ

ಪುನರೂರು ಪ್ರತಿಷ್ಠಾಣದ ಮತ್ತು ಮೂಲ್ಕಿ ಜನ ವಿಕಾಶ ಸಮಿತಿಯ ಆಶ್ರಯದಲ್ಲಿ ಪ್ರೌಢ ಶಾಲಾ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿವ ಸಲುವಾಗಿ ನಡೆದ ಪ್ರತಿಭಾ ಸೌರಭ-2018 ಕಾರ್ಯಕ್ರಮದ ಉದ್ಘಟನೆಯನ್ನು ಅಂಕಣಕಾರ ಜಿತೇಂದ್ರ ಕುಂದೇಶ್ವರ ನೆರವೇರಿಸಿದ್ದರು. ಬಳಿಕ ಮಾತನಾಡಿ, ಮಕ್ಕಳು ಮುಂದಿನ ದೇಶವನ್ನು ಕಟ್ಟುವ ಪ್ರಜೆಗಳಾಗಿದ್ದಾರೆ ಎಂದರು.ರಾಜ್ಯ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡರೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯವಿದೆ ಎಂದರು.

ಶ್ರೀ ಕ್ಷೇತ್ರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು ಮುಖ್ಯ ಅತಿಥಿಯಾಗಿ ಶುಭಾಶಂಸನೆಗೈದು, ಈ ಸಂದರ್ಭ ಮೂಲ್ಕಿ ವಿಜಯಾ ಕಾಲೇಜು ಪ್ರಾಂಶುಪಾಲ ಡಾ.ಕೆ.ನಾರಾಯಣ ಪೂಜಾರಿ ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷೆ ಎಚ್.ಕೆ.ಉಷಾರಾಣಿ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply