Header Ads
Header Ads
Breaking News

ಮೂಲ ಸೌಕರ್ಯ ಇಲ್ಲದೇ ಪರದಾಡುತ್ತಿರುವ ಮರವೂರಿನ ನಿವಾಸಿಗಳು

ಮಂಗಳೂರಿನ ಮರವೂರಿನ ೫೫ಕ್ಕೂ ಅಧಿಕ ಮನೆಗಳಿಗೆ ರೈಲು ಹಳಿ ಕಾಮಗಾರಿಯಿಂದ ರಸ್ತೆ ಸಂಪರ್ಕ ಕಡಿತವಾಗಿದೆ. ಇದರಿಂದಾಗಿ ಅಲ್ಲಿನ ನಿವಾಸಿಗಳು ರೈಲು ಹಳಿಯನ್ನೇ ಬಳಸಬೇಕಾದ ಅನಿವಾರ್ಯ ಎದುರಾಗಿದೆ.ಮರವೂರಿನ ೫೫ ಮನೆಗಳಿಗೆ ರಸ್ತೆ ಸಂಪರ್ಕ ಕಡಿತ….ರೈಲು ಹಳಿಯನ್ನೇ ರಸ್ತೆಯನ್ನಾಗಿಬೇಕಾದ ಪರಿಸ್ಥಿತಿ…. ಕಳೆದ ೫ ವರುಷಗಳಿಂದ ಇಲ್ಲಿ ಹಳಿ ಕಾಮಗಾರಿ ನಡೆಯುತ್ತಿದೆ.ಒಂದನೇ ಹಳಿಬದಿಯಲ್ಲಿ ಮಣ್ಣಿನ ರಸ್ತೆ ಇತ್ತು.ಇದುವೇ ಇಲ್ಲಿಯವರೆಗೆ ಸಂಪರ್ಕ ರಸ್ತೆಯಾಗಿತ್ತು. ಈಗ ಎರಡನೇ ಹಳಿಯ ಕಾಮಗಾರಿ ಆರಂಭಗೊಂಡಿದ್ದರಿಂದ ಈ ರಸ್ತೆಗೆ ಮಣ್ಣು ಹಾಕಲಾಗಿದೆ. ಇದರಿಂದ ರಸ್ತೆಯೇ ಇಲ್ಲದಂತಾಗಿದೆ. ರೈಲು ಹಳಿ ಕಾಮಗಾರಿಯಿಂದಾಗಿ ಮರವೂರಿನ ಕಿನ್ನಿಮುಗೇರ ಪ್ರದೇಶದ ಸುಮಾರು55ಮನೆಗಳಿಗೆ ರಸ್ತೆ ಸಂಪರ್ಕ ಕಡಿತವಾಗಿದೆ. ರಸ್ತೆ ಸಂಪರ್ಕವಿಲ್ಲದೇ ಇಲ್ಲಿಗೆ ಯಾವುದೇ ವಾಹನಗಳು ಕೂಡ ಬರಲ್ಲ, ಶಾಲಾ ಮಕ್ಕಲು ದಿನಗೂಲಿ ಕಾರ್ಮಿಕರು, ವಯಸ್ಕರು ಸಹಿತ ಸುಮಾರು 170 ಮಂದಿ ಈ ರೈಲು ಹಳಿಯನ್ನೇ ದಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ವ್ಯಾಪ್ತಿಯಲ್ಲಿ 10 ವರ್ಷಗಳಲ್ಲಿ ೧೩ಕ್ಕೂ ಅಧಿಕ ಮಂದಿ ರೈಲಿನಡಿಗೆ ಬಿದ್ದು ಸಾವನ್ನಪ್ಪಿದ್ದಾರೆ, ಅದರಲ್ಲಿ ವಯಸ್ಕರೇ ಹೆಚ್ಚು ಈ ಪ್ರದೇಶದಲ್ಲಿ ವಿಮಾನಗಳ ಹಾರಾಟ ವೇಳೆ ರೈಲು ಬರುವುದು ಕೇಳಿಸದೇ ಇರುವುದು ಈ ಅಪಘಾತಕ್ಕೆ ಕಾರಣವಾಗುತ್ತಿದೆ. ಈ ಪ್ರದೇಶ ಜನರಿಗೆ ಮಣ್ಣಿನ ರಸ್ತೆಯೇ ಸಂಪರ್ಕ ಕೊಂಡಿಯಾಗಿತ್ತು.ಅದನ್ನು ಮಣ್ಣು ಹಾಕಿ ಮುಚ್ಚಿ ರೈಲು ಹಳಿ ಮಾಡಲಾಗಿದೆ. ಈ ರಸ್ತೆ ವಿಮಾನ ದುರುಂತದ ವೇಳೆಯೂ ಹೆಚ್ಚು ಉಪಯೋಗಕ್ಕೆ ಬಂದಿತ್ತು. ವಿಮಾನ ನಿಲ್ದಾಣಕ್ಕೆ ಹತ್ತಿರವಿರುವುದರಿಂದ ಈ ರಸ್ತೆ ರೈಲ್ವೇ ಇಲಾಖೆಗೂ ಅಗತ್ಯವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಮನವಿ ನೀಡಲಾಗಿದೆ ಎಂದು ಸತೀಶ್ ದೇವಾಡಿಗ ಹೇಳಿದ್ರು.ಈ ಪ್ರದೇಶದ ವ್ಯಾಪ್ತಿಯಲ್ಲಿ ಹೈನುಗಾರಿಕೆ ಜತೆಗೆ ಭತ್ತದ ಕೃಷಿ ಮಾಡಲಾಗುತ್ತಿದೆ. ಸಂಪರ್ಕ ರಸ್ತೆ ಕೊರೆತಯಿಂದಾಗಿ ಕೃಷಿ ಮಾಡಲು ಸಮಸ್ಯೆ ಕಾಡುತ್ತಿದೆ.ರಸ್ತೆ ನೀರು, ಸಹಿತ ಮೂಲ ಸೌಕರ್ಯ ಇಲ್ಲದೇ ಇಲ್ಲಿನ ಜನರು ತೊಂದರೆ ಅನುಭವಿಸುತ್ತಿದ್ದಾರೆ.ಮಾತ್ರವಲ್ಲದೇ ರಸ್ತೆ ಇಲ್ಲದೇ ಇರುವುದರಿಂದ ೪ ಸದಸ್ಯರು ಮನೆಯನ್ನೆ ತ್ಯಜಿಸಿದ್ದಾರೆ. ಈ ನಡುವೆ ಪರ್ಯಾಯ ರಸ್ತೆ ಇಲ್ಲದ ಕಾರಣ ರೈಲ್ವೇ ಕಾಮಗಾರಿ ತೊಡಕಾಗಿದೆ. ಒಟ್ಟಿನಲ್ಲಿ ಇಲ್ಲಿನ ನಿವಾಸಿಗಳು ಪರ್ಯಾಯ ರಸ್ತೆ ಇಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕಾಗಿದೆ.

Related posts

Leave a Reply