Header Ads
Header Ads
Breaking News

ಮೂಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಕುಸಿತ.ನವಯುಗ್ ಕಂಪನಿಯ ಕಾಮಗಾರಿಯ ಗುಣಮಟ್ಟ ಬಯಲು.

ರಾಷ್ಟ್ರೀಯ ಹೆದ್ದಾರಿ 66ರ ಮೂಳೂರು ಪೇಟೆಯ ಮಧ್ಯಭಾಗದಲ್ಲೇ ರಾತ್ರಿ ೭-೩೦ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಕುಸಿಯುವ ಮೂಲಕ ಚತುಷ್ಪಥ ಕಾಮಗಾರಿ ನಡೆಸಿದ ನವಯುಗ್ ಕಂಪನಿಯ ಕಾಮಗಾರಿಯ ಗುಣಮಟ್ಟ ಬಯಲಾದಂತ್ತಾಗಿದೆ.ಹೆದ್ದಾರಿ ಕಾಮಗಾರಿಗೆ ಮುನ್ನ ಈ ಪ್ರದೇಶದಲ್ಲಿ ಬಾವಿಯೊಂದಿದ್ದು, ಅದನ್ನು ಸಂಪೂರ್ಣವಾಗಿ ಮುಚ್ಚದೆ ನಿರ್ಲಕ್ಷ್ಯ ಕಾಮಗಾರಿ ನಡೆಸಿದ್ದರಿಂದ ಈ ಸಮಸ್ಯೆ ಉದ್ಭವಗೊಂಡಿದೆ ಎನ್ನುತ್ತಾರೆ ಸ್ಥಳೀಯರು. ರಾತ್ರಿ 7-30ರ ಸುಮಾರಿಗೆ ಉಚ್ಚಿಲ ನಿವಾಸಿಯೋರ್ವರು ಈ ಭಾಗದಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದಾಗ ಕುಸಿದ ರಸ್ತೆ ಭಾಗದಲ್ಲಿ ಸಂಚರಿಸಿ ಬಿದ್ದು ಸಣ್ಣಪುಟ್ಟ ಗಾಯಗೊಂದಿಗೆ ಅಪಾಯದಿಂದ ಪಾರಾಗಿದ್ದು, ಈ ಸಂದರ್ಭ ರಸ್ತೆ ಕುಸಿದ ವಿಚಾರ ಗಮನಕ್ಕೆ ಬಂದಿದೆ. ತಕ್ಷಣ ಸ್ಥಳೀಯರು ಕಾಪು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಕುಸಿದ ರಸ್ತೆ ಭಾಗಕ್ಕೆ ಬ್ಯಾರಿಕೇಡ್ ಅಳವಡಿಸಿದ್ದಾರೆ. ತಕ್ಷಣವೇ ಇದನ್ನು ದುರಸ್ಥಿ ಪಡಿಸದಿದ್ದಲ್ಲಿ ರಾತ್ರಿ ಸಮಯ ಅಪಾಯ ಸಂಭವಿಸುವ ಸಾಧ್ಯತೆ ಅಲ್ಲಗಲೆಯುವಂತ್ತಿಲ್ಲ.

Related posts

Leave a Reply