Header Ads
Header Ads
Breaking News

ಮೂವತ್ತನಾಲ್ಕನೇ ರಾಷ್ಟ್ರೀಯ ಸಬ್ ಜೂನಿಯರ್ ಈಜು, ಮೊದಲ ಮೂರು ಸ್ಥಾನಗಳಲ್ಲಿ ಮಹಾರಾಷ್ಟ್ರ, ಅಸ್ಸಾಮ, ಕರ್ನಾಟಕ

ಕರ್ನಾಟಕದ ನೀನಾ ವೆಂಕ ಟೇಶ್ ಶುಕ್ರವಾರ ಮುಕ್ತಾಯಗೊಂಡ ೩೪ನೇ ರಾಷ್ಟ್ರೀಯ ಸಬ್ ಜೂನಿಯರ್ ಈಜು ಚಾಂಪಿಯನ್ಷಿಪ್ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದ್ದಾರೆ.
ಬಾಲಕಿಯರ ೧೦೦ ಮೀಟರ್ಸ್ ಬ್ಯಾಕ್ಸ್ಟ್ರೋಕ್ ವಿಭಾಗದಲ್ಲಿ ನೀನಾ ೧:೧೦.೮೭ಸೆ. ಮೊದಲಿಗರಾಗಿ ಗುರಿ ಮುಟ್ಟಿದರು. ನೀನಾ ಬಾಲಕಿಯರ ೫೦ ಮೀ ಬಟರ್ಫ್ಲೈ ವಿಭಾಗದಲ್ಲಿ ೩೧.೬೧ ಸೆಕೆಂಡುಗಳಲ್ಲಿ ಗುರಿ ಮುಟ್ಟುವ ಮೂಲಕ ಕಂಚು ಗೆದ್ದರು. ಚಿನ್ನದ ಪದಕವನ್ನು ಮಹಾರಾಷ್ಟ್ರದ ಸಂಜಿತಿ ಸಹಾ ಗೆದ್ದರು. ಈ ವಿಭಾಗದಲ್ಲಿ ಸಂಜತಿ ನೂತನ ಕೂಟ ದಾಖಲೆ ನಿರ್ಮಿಸಿದರು. ೨೦೧೬ರಲ್ಲಿ ಉತ್ತರಾ ಗೊಗೊಯ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಅವರು ಮುರಿದರು.
೨೦೦ ಮೀ ಬಾಲಕಿಯರ ಮೆಡ್ಲೆ ವಿಭಾಗದಲ್ಲಿ ರಿಧಿಮಾ ವೀರೇಂದ್ರ ಕುಮಾರ್ ಬೆಳ್ಳಿ ಗೆದ್ದರು. ಕಂಚಿನ ಪದಕ ಕರ್ನಾಟಕದವರೇ ಆದ ಅಂಬರ್ ಜೆ. ಸಿಂಗ್ ಅವರ ಪಾಲಾಯಿತು. ಈ ವಿಭಾಗದಲ್ಲಿ ಅಸ್ಸಾಂನ ಜಾಹನಬಿ ಕಶ್ಯಪ್ ನೂತನ ಕೂಟ ದಾಖಲೆಯ ಜತೆ ಚಿನ್ನಕ್ಕೆ ಕೊರ ಳೊಡ್ಡಿದರು. ೨:೪೬.೯೫ ಸೆಕೆಂಡುಗಳಲ್ಲಿ ಅವರು ಗುರಿ ಸೇರಿದರು. ೨೦೦೯ರಲ್ಲಿ ದಾಮಿನಿ ಗೌಡ ೨:೫೧.೫೬ ಅವರ ದಾಖಲೆಯನ್ನು ಮುರಿದರು. ಬಾಲಕರ ೧೦೦ ಮೀ ಫ್ರೀಸ್ಟೈಲ್ ವಿಭಾಗದಲ್ಲಿ ಉತ್ಕರ್ಷ್ ಎಸ್. ಪಾಟೀಲ್ ಕಂಚು ಜಯಿಸಿದರು. ಬಾಲಕರ ೪x೫೦ ಮೀಟರ್ಸ್ ಫ್ರೀಸ್ಟೈಲ್ ವಿಭಾಗದಲ್ಲಿ ಕರ್ನಾಟಕ ತಂಡ ೧:೫೯.೩೧ ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಕಂಚು ಗೆದ್ದುಕೊಂಡಿತು. ಈ ವಿಭಾಗದ ಚಿನ್ನದ ಪದಕ ಅಸ್ಸಾಂ ತಂಡದ ಪಾಲಾಯಿತು.
ಕರ್ನಾಟಕವು ೫ ಚಿನ್ನ, ೮ ಬೆಳ್ಳಿ, ೧೨ ಕಂಚು ಸೇರಿ ೨೫ ಪದಕಗಳನ್ನು ಗೆದ್ದು ಮೂರನೇ ಸ್ಥಾನ ಪಡೆಯಿತು. ೧೭ ಚಿನ್ನ ಸಹಿತ ೩೦ ಪದಕ ಗೆದ್ದ ಮಹಾರಾಷ್ಟ್ರ ಮೊದಲ ಸ್ಥಾನ ಪಡೆದರೆ, ೮ ಚಿನ್ನ ಸಹಿತ ೨೬ ಪದಕ ಪಡೆದ ಅಸ್ಸಾಮ ಎರಡನೇ ಸ್ಥಾನ ಪಡೆಯಿತು.

Related posts

Leave a Reply