Header Ads
Header Ads
Breaking News

ಮೂವತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಮಣಿಪಾಲ ಸಹಕರಿತ ಪ್ರಜನನ ಕೇಂದ್ರ ಮಾರ್ಕ್

ಮಣಿಪಾಲ ಸಹಕರಿತ ಪ್ರಜನನ ಕೇಂದ್ರ ಮಾರ್ಕ್ ತನ್ನ ಮೂವತ್ತು ವರ್ಷಗಳ ಸೇವೆಯನ್ನು ಮಕ್ಕಳ ತನ್ನ ಮೂವತ್ತು ವರ್ಷಗಳ ಸೇವೆಯನ್ನು ಮಕ್ಕಳಿಲ್ಲದ ದಂಪತಿಗಳ ಚಿಕಿತ್ಸೆಯಲ್ಲಿ ಪೂರೈಸಿರುವ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಯ ಫೆಬ್ರವರಿ 17ರಂದು ಸಂಜೆ 3 ಗಂಟೆಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಡೆಯಲಿದೆ ಎಂದು ಮಣಿಪಾಲ ಸಹಕರಿತ ಪ್ರಜನನ ಕೇಂದ್ರದ ಮುಖ್ಯಸ್ಥ ರಾಗಿರುವ ಡಾ. ಪ್ರತಾಪ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾವಿರದ ಒಂಬೈನೂರ ತೊಂಬತ್ತು ರಲ್ಲಿ ಆರಂಭಗೊಂಡ ಮಾರ್ಕ್ ಸಂತಾನಹೀನತೆ ಚಿಕಿತ್ಸೆಯಲ್ಲಿ ಅದ್ವಿತೀಯ ಔನತ್ಯ ವನ್ನು ಸಾಧಿಸಿದ್ದು ಸರಳ ಚಿಕಿತ್ಸೆಗಳು ಅಂದಿಗೆ ಆರಂಭಗೊಂಡ ಈ ಮಾರ್ಕ್ ವಿಭಾಗವು 1998 ರಲ್ಲಿ ಪ್ರನಾಳ ಶಿಶು ಪ್ರಕ್ರಿಯೆಯನ್ನು ಆರಂಭಿಸಿತ್ತು. ಅಂತೆಯೇ ಐವಿಎಫ್ ಚಿಕಿತ್ಸೆಯಲ್ಲಿ ಕೂಡ ಹೆಸರನ್ನು ಗಳಿಸಿರುತ್ತದೆ. ಸುಮಾರು 5 ಸಾವಿರಕ್ಕೂ ಮಿಕ್ಕಿ ಶಿಶುಗಳ ಜನನ ವನ್ನು ಮುಖಾಂತರ ಸಾಧಿಸಲಾಗಿದೆ. ಇಷ್ಟೇ ಅಲ್ಲದೆ ಸಂತಾನಹೀನ ದಂಪತಿಗೆ ಹಲವು ವಿಧದ ಸಹಜ ಚಿಕಿತ್ಸೆ ಗಳು ಲಭ್ಯವಿದ್ದು ವಿದೇಶದಲ್ಲಿ ಚಿಕಿತ್ಸೆಯ ತಾಂತ್ರಿಕ ಪರಿಣತಿ ಪಡೆದಿರುವ ನುರಿತ ವೈದ್ಯರು ಮತ್ತು ವಿಜ್ಞಾನಿಗಳು ಈ ಚಿಕಿತ್ಸೆಯನ್ನು ನೀಡಲಿದ್ದಾರೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಪುರುಷರಲ್ಲಿ ಸಂತಾನಹೀನತೆ ವಿಶ್ಲೇಷಣೆಗಾಗಿ ಸುಸಜ್ಜಿತ ಎಂಬ್ರಿಯಾಲಜಿ ಪ್ರಯೋಗಾಲಯ ಲೇಸರ್ ಹ್ಯಾಚಿಂಗ್ ಸೌಲಭ್ಯ ಮತ್ತಿತರ ಅತ್ಯಾಧುನಿಕ ತಂತ್ರಜ್ಞಾನ ಗಳನ್ನು ಒಳಗೊಂಡಿರುತ್ತದೆ. ಸಾವಿರ ಒಂಬೈನೂರ 98ರಲ್ಲಿ ಐವಿಎಫ್ ತಂತ್ರಜ್ಞಾನ ಆರಂಭಗೊಂಡಿದ್ದು ಸಾವಿರದ 999 ಫೆಬ್ರವರಿ 18 ರಂದು ಮೊದಲ ಪ್ರನಾಳ ಶಿಶು ಮಣಿಪಾಲದಲ್ಲಿ ಜನವಾಗಿರುತ್ತದೆ ಎಂದು ಉಲ್ಲೇಖಿಸಿದರು ಕಳೆದ ಮೂರು ವರ್ಷಗಳಿಂದ ಬಯಸು ಅಥವಾ ಬೇರೆ ರೋಗಗಳ ಕಾರಣದಿಂದಾಗಿ ಅಂಡಾಣು ಉತ್ಪಾದನೆಯಲ್ಲಿ ಸಮಸ್ಯೆಗಳು ಇರುವವರಿಗೆ ಅಂಡಾಣು ದಾನ ಸೌಲಭ್ಯ ಮಾರ್ಚ್‍ನಲ್ಲಿ ಲಭ್ಯವಿರುತ್ತದೆ ಗರ್ಭಕೋಶದ ತೊಂದರೆ ಇರುವವರಿಗೆ ಸರೊಗಸಿ, ವೀರ್ಯ ಬ್ಯಾಂಕಿಂಗ್ ವ್ಯವಸ್ಥೆಯೂ ಕೂಡ ಸಾರ್ವಜನಿಕರಿಗೆ ಉಪಯೊಹಗಿಸಿಕೊಳ್ಳಲು ಅವಕಾಶವಿರುತ್ತದೆ ಎಂದು ತಿಳಿಸಿದರು.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಮಾರ್ಕ್ ವಿಭಾಗದ ಡಾ. ಸಚಿನ್ ಕಾರಂತ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related posts

Leave a Reply