Header Ads
Header Ads
Breaking News

ಮೃತ ಪ್ರಶಾಂತ್ ಪೂಜಾರಿ ಮನೆಗೆ ತೆರಳಿ ಉಮಾನಾಥ್ ಗೆಲುವನ್ನು ಪ್ರಶಾಂತ್ ಪೂಜಾರಿಗೆ ಅರ್ಪಿಸಿದ ಕೋಟ್ಯಾನ್ ಪ್ರಶಾಂತ್ ತಂದೆ, ತಾಯಿ ಯೋಗಕ್ಷೇಮ ವಿಚಾರಿಸಿದ ಉಮಾನಾಥ್

ಕಳೆದ ಮೂರು ವರ್ಷಗಳ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಪ್ರಶಾಂತ್ ಪೂಜಾರಿ ಮನೆಗೆ ಬಿಜೆಪಿ ವಿಜೇತ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಭೇಟಿ ನೀಡಿ ತನ್ನ ಗೆಲುವನ್ನು ಪ್ರಶಾಂತ್‌ಗೆ ಅರ್ಪಿಸಿದರು. ಈ ವೇಳೆ ಮನೆಯಲ್ಲಿದ್ದ ಪ್ರಶಾಂತ್ ತಂದೆ ಆನಂದ ಪೂಜಾರಿ, ತಾಯಿ ಯಶೋಧ ಹಾಗೂ ಸಹೋದರಿ ಮತ್ತು ಕುಟುಂಬ ಸದಸ್ಯರ ಯೋಗಕ್ಷೇಮ ವಿಚಾರಿಸಿದರು. 

ಬಳಿಕ ಪ್ರಶಾಂತ್ ಪೂಜಾರಿ ಭಾವಚಿತ್ರಕ್ಕೆ ಮಾಲಾರ್ಪಣೆಗೈದು ಬಾವುಕರಾದರು. ಈ ವೇಳೆ ಪ್ರಶಾಂತ್ ತಾಯಿ ಗದ್ಗದಿತರಾಗಿ ಕಣ್ಣೀರಿಟ್ಟು ಉಮಾನಾಥ ಕೋಟ್ಯಾನ್ ಅವರನ್ನು ಬಿಗಿದಪ್ಪಿ ಮಗನನ್ನು ನೆನೆದರು. ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದ ಕೋಟ್ಯಾನ್, ಮಗನಾಗಿಯೂ, ಸಹೋದರನಾಗಿಯೂ ಸದಾ ನಿಮ್ಮೊಂದಿಗೆ ಇರುವುದಾಗಿ ಭರವಸೆ ನೀಡಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಹಿಂದೂ ಸಂಘಟನೆಗಳಲ್ಲಿ ಸಕ್ರೀಯನಾಗಿದ್ದು, ತನ್ನ ಪ್ರಾಣವನ್ನೇ ಹಿಂದೂತ್ವಕ್ಕಾಗಿ ಬಲಿದಾನ ಮಾಡಿರುವ ಪ್ರಶಾಂತ್ ಪೂಜಾರಿ ಅವರ ಕುಟುಂಬದ ಜೊತೆ ನಾನು ಸದಾ ನಾವಿದ್ದೇವೆ. ಬಿಜೆಪಿ ಶಾಸಕನನ್ನು ಮೂಡುಬಿದಿರೆಯಲ್ಲಿ ನೋಡಬೇಕೆನ್ನುವ ಪ್ರಶಾಂತ್ ಪೂಜಾರಿ ಬಯಕೆ ಇಂದು ಈಡೇರಿದೆ. ಪ್ರಶಾಂತ್ ನಮ್ಮ ಜೊತೆ ಇರಬೇಕಿತ್ತು. ಆದರೆ ಮಾನಸಿಕವಾಗಿ ಆತ ನಮ್ಮ ಜೊತೆ ಸದಾ ಇರುತ್ತಾನೆ ಎಂದರು.

Related posts

Leave a Reply