Header Ads
Header Ads
Breaking News

ಮೆಸ್ಕಾಂ ಅವ್ಯವಸ್ಥೆಗಳ ವಿರುದ್ಧ ಸಿಪಿಐಎಂ ನಾಯಕರ ವಾಗ್ದಾಳಿ

ವಿಪರೀತ ವಿದ್ಯುತ್‌ದರ ಏರಿಕೆ, ಹೆಚುವರಿ ಡಿಪಾಸಿಟ್, ತಪ್ಪು ಲೆಕ್ಕಾಚಾರ ಮುಂತಾದ ಮೆಸ್ಕಾಂನ ಅವ್ಯವಸ್ಥೆಗಳನ್ನು ವಿರೋಧಿಸಿ ಸಿಪಿಐಎಂ ಸಂಘಟನೆಯ ವತಿಯಿಂದ ಮಂಗಳೂರಿನ ಮೆಸ್ಕಾಂ ಪ್ರದಾನ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನ ನಡೆಯಿತು.

ಮಹಾನಗರ ಪಾಲಿಕೆ ಕಚೇರಿಯ ಮುಂಭಾಗದಿಂದ ಮೆಸ್ಕಾಂ ಪ್ರದಾನ ಕಚೇರಿಯ ವರೆಗೆ ಮೆಸ್ಕಾಂ ಅವ್ಯವಸ್ಥೆಯ ವಿರುಧ್ಧ ಘೋಷಣೆಗೊಗುತ್ತಾ ಮೆರವಣಿಗೆಯ ಮೂಲಕ ಬರಲಾಯಿತು. ಈ ಸಂದರ್ಭ ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿಯ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಮಾತನಾಡಿ ಎಲ್ಲಾ ವಸ್ತುಗಳ ಮೇಲೆ ಬೆಲೆಯೇರಿಕೆಯಾಗಿದೆ ಇದರ ಜೊತೆಗೆ ವಿಪರೀತ ವಿದ್ಯುತ್‌ದರ ಏರಿಕೆಯಿಂದ ಸಾಮಾನ್ಯ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ, ಜನತೆ ಈ ಅವ್ಯವಸ್ಥೆಯಿಮದ ಕಂಗೆಟ್ಟಿದ್ದಾರೆ, ಮುಂದೆಲ್ಲಾ ವಿದ್ಯುತ್ ದರ ಏರಿಕೆಯಾದಾಗ ಪತ್ರಿಕೆಯಲ್ಲಿ ಬರುತ್ತಿತ್ತು ಆದರೆ ಇತ್ತಿಚೆಗೆ ಯಾವುದೇ ಸುದ್ದಿ ಇಲ್ಲದೆ ಇದ್ದಕ್ಕಿದ್ದಂತೆ ಬೆಲೆ ಏರಿಕೆ ಮಾಡುತ್ತಾರೆ, ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಬಳಿಕ ಸಿಪಿಐಎಂ ಮಂಗಳೂರು ನಗರ ಉತ್ತರ ಸಮಿತಿಯ ಕಾರ್ಯದರ್ಶಿ ದಯಾನಂದ ಶೆಟ್ಟಿ ಪಂಜಿಮೊಗರು ಮಾತನಾಡಿ ಮಂಗಳೂರಿನ ಜನತೆ ನಾವು ಹಾಕುವ ಮತಕ್ಕೂ ನಮ್ಮ ಬದುಕಿಗೂ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ, ಮೆಸ್ಕಾಂ ನಿರತಂತರವಾಗಿ ವಿದ್ಯುತ್ ಬೆಲೆ ಏರಿಕೆ ಮಾಡುತ್ತಿದೆ. ಆದರೆ ಜನತೆ ಮಾತನಾಡುತ್ತಿಲ್ಲ, ಮೆಸ್ಕಾಂ ಹಗಲು ದರೋಡೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.ಈ ಸಂದರ್ಭ ಸಿಪಿಐಎಂ ಸಂಘಟನೆಯ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *