Header Ads
Breaking News

ಮೆಸ್ಕಾಂ ಇಲಾಖೆಯಲ್ಲಿ ವಿದ್ಯುತ್ ದರ ಏಕಾಏಕಿ ಏರಿಕೆ : ಕಾರ್ಕಳ ತಾ.ಪಂ. ಸಭೆಯಲ್ಲಿ ಕೇಳಿ ಬಂದ ಆರೋಪ

ಕಾರ್ಕಳ: ಮೆಸ್ಕಾಂ ಇಲಾಖೆಯು ವಿದ್ಯುತ್ ದರವನ್ನು ಏಕಾಏಕಿಯಾಗಿ ಏರಿಸಿರುವುದು ಗ್ರಾಹಕರಿಗೆ ಶಾಕ್ ನೀಡುವಂತಾಗಿದೆ. ಉಪಯೋಗಕ್ಕಿಂತ ಹೆಚ್ಚುವರಿಯಾಗಿ ಬಿಲ್ ಗ್ರಾಹಕನ ಕೈಸೇರುತ್ತಿದ್ದು, ಇದನ್ನು ಪ್ರಶ್ನಿಸಲು ಕಚೇರಿಗೆ ತೆರಳಿದರೆ ಬಾಕಿ ಇರುವ ಎಲ್ಲಾ ಮೊತ್ತವನ್ನು ಒಂದೇ ಕಂತಿನ ಬಿಲ್ ಪಾವತಿಸಲೇಬೇಕು ಎಂಬ ಉತ್ತರ ಮಾತ್ರ ದೊರೆಯುತ್ತದೆ ಹೊರತು ಸಮಸ್ಸೆಗೆ ಪರಿಹಾರ ದೊರೆಯುತ್ತಿಲ್ಲ ಎಂಬ ಗಂಭೀರ ಆರೋಪವು ತಾಲೂಕು ಪಂಚಾಯತ್ ಅಧ್ಯಕ್ಷ ಸೌಭಾಗ್ಯ ಮಡಿವಾಳ ಅವರದಾಗಿತ್ತು.ಕಾರ್ಕಳ ತಾಲೂಕು ಪಂಚಾಯತ್ 20ನೇ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಈ ಬಗ್ಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದರು.ತಾ.ಪಂ.ಅಧ್ಯಕ್ಷ ಸೌಭಾಗ್ಯ ಮಡಿವಾಳ, ಉಪಾಧ್ಯಕ್ಷ ಹರೀಶ್ ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರವೀಣ್ ಕೋಟ್ಯಾನ್, ಸಿಇಒ ಮೇಜರ್ ಹರ್ಷ ಕೆ.ಬಿ, ತಹಸೀಲ್ದಾರ್ ಪುರಂದರ ಹೆಗ್ಡೆ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *