Header Ads
Breaking News

ಮೆಸ್ಕಾಂ ಗುತ್ತಿಗೆದಾರರ ದೌರ್ಜನ್ಯ ಆರೋಪ ವಿಚಾರ : ಮೀಟರ್ ರೀಡರ್‍ಗಳಿಗೆ ವೇತನ ನೀಡದೆ ಅನ್ಯಾಯ

ಕಳೆದ 17 ವರ್ಷಗಳಿಂದ ಮೀಟರ್ ರೀಡರ್‍ಗಳಾಗಿ ದುಡಿಯುತ್ತಿರುವ ಲೈನ್‍ಮೆನ್‍ಗಳಿಗೆ ಗುತ್ತಿಗೆದಾರರು ವೇತನ ನೀಡದೆ ಅನ್ಯಾಯವೆಸಗುತ್ತಿದ್ದಾರೆ ಎಂದು ಇಂಟೆಕ್ ಕಾನೂನು ಸಲಹೆಗಾರ ದಿನಕರ್ ಶೆಟ್ಟಿ ಹೇಳಿದರು.

ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಬಂಟ್ವಾಳ, ಪುತ್ತೂರು ತಾಲೂಕಿನಲ್ಲಿ ಮೆಸ್ಕಾಂ ಗುತ್ತಿಗೆದಾರರು ವೇತನ ನೀಡದೆ ದೌರ್ಜನ್ಯವೆಸಗುತ್ತಿದ್ದಾರೆ. ಕಳೆದ 17 ವರುಷಗಳಿಂದ ದುಡಿಯುತ್ತಿರುವ ಮೀಟರ್ ರೀಡರ್ ಗಳಿಗೆ ಅನ್ಯಾಯ ಆದಂತಾಗಿದೆ. ಕಳೆದ 3 ತಿಂಗಳಿನಿಂದ ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರರಿಂದ ಅನ್ಯಾಯವಾಗುತ್ತಿದೆ. ಏಕಾಏಕಿ ಮೀಟರ್ ರೀಡರ್ ಗಳಿಗೆ ವೇತನದಲ್ಲಿ ಕಡಿತ ಮಾಡಿದ್ದಾರೆ.ಕನಿಷ್ಟ ಸಂಬಳ ನಿಗದಿಪಡಿಸಿ, ಗರಿಷ್ಟ ಕೆಲಸ ಮಾಡಿಸಲಾಗುತ್ತಿದೆ. ಕೆಲವರು ಈಗಾಗಲೇ ಈ ಕೆಲಸವನ್ನ ತೊರೆಯುತ್ತಿದ್ದಾರೆ. ಸದ್ಯ ಮೆಸ್ಕಾಂ ಸಿಬ್ಬಂದಿಗಳೇ ಮೀಟರ್ ರೀಡಿಂಗ್ ಮಾಡುತ್ತಿದ್ದಾರೆ. ಜನಸೇವೆ ಮಾಡಬೇಕಾದ ಲೈನ್ ಮ್ಯಾನ್‍ಗಳು ಮೀಟರ್ ರೀಡಿಂಗ್ ಮಾಡುತ್ತಿದ್ದಾರೆ. ಜನಪ್ರತಿನಿಧಿಗಳ ಮಾತಿಗೂ ಗುತ್ತಿಗೆದಾರರು ಒಪ್ಪುತ್ತಿಲ್ಲ. ಮೆಸ್ಕಾಂ ಅಧಿಕಾರಿಗಳಿಂದಲೂ ಯಾವುದೇ ಭರವಸೆ ಸಿಕ್ಕಿಲ್ಲ. ಬಂಟ್ವಾಳದಲ್ಲಿ ಗುತ್ತಿಗೆ ಪಡೆದ ಸಂಸ್ಥೆ ಕಪ್ಪು ಪಟ್ಟಿಯಲ್ಲಿದೆ. ಅ.14 ರಂದು ಮೆಸ್ಕಾಂ ಕಚೇರಿ ಎದುರು ಪ್ರತಿಭಟಿಸಲಿದ್ದೇವೆ ಎಂದು ಹೇಳಿದರು.

Related posts

Leave a Reply

Your email address will not be published. Required fields are marked *