Header Ads
Breaking News

ಮೇಣದ ಬತ್ತಿ ಬೆಳಕಿನಲ್ಲಿ ವಿದ್ಯಾರ್ಥಿಗಳ ಮದುವೆ, ಉತ್ತರ ಪ್ರದೇಶದ ಬರೇಲಿಯಲ್ಲಿ ಒಂದು ಆಘಾತ ಕಲ್ಯಾಣ

ಉತ್ತರ ಪ್ರದೇಶದ ಬರೇಲಿ ಪಟ್ಟಣದ ಪ್ರೌಢಶಾಲೆಯೊಂದರ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಮೇಣದ ಬತ್ತಿ ಬೆಳಕಿನಲ್ಲಿ ಮದುವೆಯಾಗಿದ್ದಾರೆ!
ಈ ಪಟ್ಟಣದ ಪ್ರಮುಖ ಶಾಲೆಯೊಂದರಲ್ಲಿ ಕಳೆದ ರಾತ್ರಿ ಈ ಆಘಾತಕಾರಿ ಪ್ರಕರಣ ನಡೆದಿದೆ. ಮದುವೆಯಾದವರು ಇಬ್ಬರೂ ೧೦ನೇ ತರಗತಿ ವಿದ್ಯಾರ್ಥಿಗಳು! ಹೋಮಕ್ಕೆ ಕಟ್ಟಿಗೆಗಳು ಇಲ್ಲದೇ ಇದ್ದುದರಿಂದ ಮೇಣದ ಬತ್ತಿ ಉರಿಸಿ ಇಬ್ಬರೂ ಮದುವೆಯ ಪ್ರತಿಜ್ಞೆ ಸ್ವೀಕರಿಸಿದ್ದಾರೆ. ಅನಂತರ ಬಾಲಕ ವರ, ಬಾಲಕಿ ವಧುವಿನ ಹಣೆಗೆ ಕುಂಕುಮ ಇಟ್ಟಿದ್ದಲ್ಲದೇ ತಾಳಿಯನ್ನೂ ಕಟ್ಟಿದ್ದಾನೆ ಎಂದು ಹೇಳಲಾಗಿದೆ. ಶಾಲೆಯ ಆವರಣದಲ್ಲಿರುವ ಆಟದ ಮೈದಾನದ ಒಂದು ಮೂಲೆಯಲ್ಲಿ ನಡೆದ ಈ ಮದುವೆಗೆ ಅವರ ಕೆಲವು ಆಪ್ತ ಸ್ನೇಹಿತರು ಸಾಕ್ಷಿಯಾಗಿದ್ದರು ಎಂದು ವರದಿಯಾಗಿದೆ.
ವಿದ್ಯಾರ್ಥಿಯು ಕುಂಕುಮ, ಮೊಂಬತ್ತಿ ಮತ್ತು ತಾಳಿಯನ್ನು ತಂದಿದ್ದ ಎಂದು ವರದಿಗಳು ಹೇಳಿವೆ. ೧೬ ವರ್ಷದ ವಿದ್ಯಾರ್ಥಿನಿಯ ಹಣೆಯಲ್ಲಿ ಕುಂಕುಮ ಮತ್ತು ಕ