Header Ads
Header Ads
Header Ads
Breaking News

ಮೇಯರ್ ಅಧ್ಯಕ್ಷೆತೆಯಲ್ಲಿ ಟ್ರಾಫಿಕ್ ಸಮಸ್ಯೆ ಕುರಿತು ಚರ್ಚೆ ಪ್ರಮುಖ ಅಧಿಕಾರಿಗಳು, ಪಾಲಿಕೆ ಸದಸ್ಯರು ಗೈರು ಕಾಟಾಚಾರಕ್ಕೆ ನಡೆಯಿತು ಮಾಸಿಕ ಸಭೆ

 

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಸಂಚಾರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮೇಯರ್ ಕವಿತಾ ಸನಿಲ್ ಅಧ್ಯಕ್ಷೆತೆಯಲ್ಲಿ ಸಭೆ ನಡೆಯಿತು. ಅದ್ರೆ ಆರ್‌ಟಿ‌ಓ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಸಭೆಗೆ ಬಾರದೇ ಇರುವುದಕ್ಕಾಗಿ ಮೇಯರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ರು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ವಾಹನ ದಟ್ಟಣೆ ಸೇರಿದಂತೆ, ರಸ್ತೆ ಸಂಚಾರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪಾಲಿಕೆ ಸಭಾಂಗಣದಲ್ಲಿ ಮೇಯರ್ ಕವಿತಾ ಸನಿಲ್ ಅಧ್ಯಕ್ಷತೆಯಲ್ಲಿ ಟ್ರಾಫಿಕ್ ಸಮಸ್ಯೆಯ ಕುರಿತು ಸಭೆ ನಡೆಯಿತು. ಈ ಸಭೆಯಲ್ಲಿ ಮಾತ್ರ ಪ್ರಮುಖ ಅಧಿಕಾರಿಗಳು ಸಭೆಗೆ ಭಾಗವಹಿಸದೇ ಇರುವುದಕ್ಕೆ ಮೇಯರ್ ಅಸಮಾಧಾನಕ್ಕೆ ಕಾರಣವಾಯ್ತು, ಇದೇ ವೇಳೆ ಮೇಯರ್ ಆರ್‌ಟಿ‌ಓ ಅಧಿಕಾರಿಯನ್ನು ಫೋನ್ ಮೂಲಕ ತರಾಟೆಗೆ ತೆಗೆದುಕೊಂಡರು.

ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕಾಂಟ್ರಾಕ್ಟ್ ಕ್ಯಾರೇಜ್ ಬಸ್‌ಗಳು ಸಂಚಾರ ಮಾಡುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ ಎಂದು ಸಭೆಯಲ್ಲಿ ಪಾಲಿಕೆ ಸದಸ್ಯ ನವೀನ್ ಡಿಸೋಜಾ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್, ಬಸ್‌ಗಳನ್ನು ಮುಟ್ಟುಗೋಲು ಹಾಕಲು ಜಾಗದ ಕೊರತೆ ಇದೆ ಎಂದು ಸಭೆಯಲ್ಲಿ ತಿಳಿಸಿದಾಗ, ಆರೋಪಿಗಳನ್ನ ಬಂಧನ ಮಾಡುವ ಸಂದರ್ಭ ಜೈಲ್‌ನಲ್ಲಿ ಜಾಗ ಇಲ್ಲ ಎಂದು ಅವರನ್ನು ಬಿಡುಗಡೆ ಮಾಡ್ತೀರಾ ಎಂದು ಪಾಲಿಕೆ ಸದಸ್ಯ ನವೀನ್ ಡಿಸೋಜಾ ಪ್ರಶ್ನಿಸಿದರು. ಪೊಲೀಸ್ ಇಲಾಖೆ ಈ ಬಗೆ ಗಂಭೀರವಾಗಿ ಚರ್ಚಿಸಿದ್ದು, ಕೆಲವೇ ತಿಂಗಳಲ್ಲಿ ಈ ಬಗೆ ಸೂಕ್ತ ನಿರ್ಧಾರವನ್ನು ಹಿರಿಯ ಅಧಿಕಾರಿಗಳನ್ನು ಚರ್ಚಿಸಿ, ಪ್ರಕಟಿಸಲಾಗುವುದು ಎಂದು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ತಿಳಿಸಿದರು.

ನಗರದ ವಿವಿಧ ರಸ್ತೆಗಳಲ್ಲಿನ ಸಂಚಾರ ಸಮಸ್ಯೆಗಳ ಬಗೆ ಪಾಲಿಕೆ ಸದಸ್ಯರು ಗಮನ ಸೆಳೆದರು.ಬಹುತೇಕ ಸದಸ್ಯರ ಹಾಗೂ ಅಧಿಕಾರಿಗಳು ಗೈರು ಹಾಜರ್ ಹಾಗುವ ಮೂಲಕ ನೀರಸ ಪ್ರತಿಕ್ರಿಯೆ ಎದ್ದು ಕಾಣಿತು.

Related posts

Leave a Reply